ಕ್ಲೀನ್ ಕ್ಯಾಚ್ ಪಡೆದಂತೆ ನಟಿಸಿದ ಫೋಕ್ಸ್, ಇಂಗ್ಲೆಂಡಿನ ಕ್ರೀಡಾಸ್ಫೂರ್ತಿ ಪ್ರಶ್ನಿಸಿದ ಭಾರತದ ಅಭಿಮಾನಿಗಳು

Photo: X \@itzSekar
ಹೊಸದಿಲ್ಲಿ: ರಾಂಚಿಯಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ನ 2ನೇ ದಿನವಾದ ಶನಿವಾರ ಯಶಸ್ವಿ ಜೈಸ್ವಾಲ್ ರನ್ನು ಔಟ್ ಮಾಡಲು ಇಂಗ್ಲೆಂಡ್ ವಿಕೆಟ್ ಕೀಪರ್ ಬೆನ್ ಫೋಕ್ಸ್ ಅವರು ಕ್ಲೀನ್ ಕ್ಯಾಚ್ ಪಡೆದಂತೆ ನಟಿಸಿದ್ದು, ಭಾರತದ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಕ್ರೀಡಾ ಸ್ಫೂರ್ತಿಯನ್ನು ಪ್ರಶ್ನಿಸಿದ್ದಾರೆ.
ರಾಬಿನ್ಸನ್ ಅವರ 20ನೇ ಓವರ್ನ ಅಂತಿಮ ಎಸೆತ ಜೈಸ್ವಾಲ್ ಬ್ಯಾಟನ್ನು ಸವರಿ ವಿಕೆಟ್ ಕೀಪರ್ ಕೈ ಸೇರಿತು. ಇಂಗ್ಲೆಂಡ್ ಕೀಪರ್ ಫೋಕ್ಸ್ ತಾನು ಕ್ಲೀನ್ ಕ್ಯಾಚ್ ಪಡೆದೆನೆಂದು ಭಾವಿಸಿ ಸಂಭ್ರಮಿಸಲು ಆರಂಭಿಸಿದರು.
ಆದರೂ ಕ್ಯಾಚ್ ಸರಿಯಾಗಿದೆಯೇ ಎಂದು ಮರು ಪರಿಶೀಲಿಸಲು ಮೂರನೇ ಅಂಪೈರ್ ಮೊರೆ ಹೋಗಲಾಯಿತು.ಆದರೆ ಚೆಂಡು ಫೋಕ್ಸ್ ಅವರ ಕೈಗವಸುಗಳಲ್ಲಿ ಸೇರುವ ಮೊದಲು ಪುಟಿದಿತ್ತು ಎಂಬುದು ರಿಪ್ಲೇಯಲ್ಲಿ ಕಂಡುಬಂತು.
ಈ ನಿರ್ಧಾರವು ಇಂಗ್ಲೆಂಡ್ ತಂಡ ಅದರಲ್ಲೂ ಮುಖ್ಯವಾಗಿ ನಾಯಕ ಬೆನ್ ಸ್ಟೋಕ್ಸ್ಗೆ ಅಚ್ಚರಿವುಂಟು ಮಾಡಿತು. ಅವರು ಮುಖದ ಮೇಲೆ ಕೈ ಇಟ್ಟು ಅಚ್ಚರಿಪಟ್ಟಿರುವ ಚಿತ್ರ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದೆ. ಇಂಗ್ಲೆಂಡ್ ವಂಚಕರ ತಂಡ ಎಂದು ಅಭಿಮಾನಿಗಳು ಜರಿದಿದ್ದಾರೆ.
ಫೋಕ್ಸ್ ಎದುರಲ್ಲೇ ಚೆಂಡು ಪುಟಿದಿರುವುದು ಸ್ಪಷ್ಟವಾಗಿ ಕಾಣುತ್ತಿದ್ದರಿಂದ ಜೈಸ್ವಾಲ್ ಗೆ ಔಟ್ ನೀಡಲಾಗಿಲ್ಲ. ಈ ಕುರಿತು ಅಂಪೈರ್ ಬಳಿ ವಾದಿಸುವುದು ಮೂರ್ಖತನವಾಗುತ್ತದೆ ಎಂದು ಇನ್ನೋರ್ವ ಅಭಿಮಾನಿ ಟ್ವೀಟಿಸಿದ್ದಾರೆ.
ಬೆನ್ ಫೋಕ್ಸ್ ದಯವಿಟ್ಟು ಕೈಗವಸಿನ ಬಣ್ಣ ಬದಲಿಸಿ ಎಂದು ಕ್ರಿಕೆಟ್ ಅಭಿಮಾನಿಯೊಬ್ಬರು ಟೀಕಿಸಿದ್ದಾರೆ.
Ben Foakes please change
— Sekar (@itzSekar) February 24, 2024
gloves colour pic.twitter.com/jxxqoMzWHu







