The French Open | ವಾವ್ರಿಂಕ, ಮೊನ್ಫಿಲ್ಸ್ಗೆ ವೈಲ್ಡ್ ಕಾರ್ಡ್

ವಾವ್ರಿಂಕ , ಗಾಯೆಲ್ ಮೊನ್ಫಿಲ್ಸ್ | Photo Credit : PTI , AP
ಪ್ಯಾರಿಸ್, ಮೇ 12: ಮೂರು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಸ್ಟ್ಯಾನ್ ವಾವ್ರಿಂಕ ಹಾಗೂ ಇನ್ನೋರ್ವ ಆಟಗಾರ ಗಾಯೆಲ್ ಮೊನ್ಫಿಲ್ಸ್ಗೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಗಾಗಿ ವೈಲ್ಡ್ ಕಾರ್ಡ್ ನೀಡಲಾಗಿದೆ.
2015ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವ 41ರ ವಯಸ್ಸಿನ ವಾವ್ರಿಂಕ ಇದೀಗ 125ನೇ ರ್ಯಾಂಕಿನಲ್ಲಿದ್ದಾರೆ. 39ರ ವಯಸ್ಸಿನ ಮೊನ್ಫಿಲ್ಸ್ 2008ರಲ್ಲಿ ಪ್ಯಾರಿಸ್ನಲ್ಲಿ ಸೆಮಿಫೈನಲ್ಗೆ ತಲುಪಿದ್ದು, ಸದ್ಯ 222ನೇ ರ್ಯಾಂಕಿನಲ್ಲಿದ್ದಾರೆ.
ವಾವ್ರಿಂಕ ಹಾಗೂ ಮೊನ್ಫಿಲ್ಸ್ ಈ ವರ್ಷಾಂತ್ಯದಲ್ಲಿ ನಿವೃತ್ತಿಯಾಗುವ ಯೋಚನೆಯಲ್ಲಿದ್ದಾರೆ. ಇಬ್ಬರಿಗೂ ಪ್ಯಾರಿಸ್ ನಲ್ಲಿ ಕೊನೆಯ ಪಂದ್ಯ ಆಡುವ ಅವಕಾಶ ನೀಡುವ ಮೂಲಕ ಗೌರವಿಸಲು ನಿರ್ಧರಿಸಲಾಗಿದೆ.
ನಿಶೇಶ್ ಬಸವರೆಡ್ಡಿ, ಟಿಟೌನ್ ಡ್ರೊಗೆಟ್, ಹ್ಯೂಗೊ ಗಾಸ್ಟನ್, ಅರ್ಥರ್ ಗಿಯ, ಮೊಸ್ ಕೊಯಾಮ್ ಹಾಗೂ ಆ್ಯಡಮ್ ವಾಲ್ಟನ್ ಅವರಿಗೆ ಫ್ರೆಂಚ್ ಓಪನ್ ಆಯೋಜಕರು ವೈಲ್ಡ್ ಕಾರ್ಡ್ ನೀಡಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಕ್ಲಾರಾ ಬುರೆಲ್, ಸೆನಿಯಾ ಫ್ರೆಮೋವಾ, ಪಿಯೊನಾ ಫೆರೊ, ಲಿಯೊಲಿಯಾ ಜೀನ್ಜೀನ್, ಸಾರಾ ರಕೊಟೊಮಾಂಗಾ, ಅಲಿಸ್ ಟುಬೆಲ್ಲೊ ಹಾಗೂ ಆಕಾಶ ಉರ್ಹೋಬೊ ಅವರಿಗೆ ವೈಲ್ಡ್ ಕಾರ್ಡ್ ನೀಡಲಾಗಿದೆ.
ಕ್ಲೇ-ಕೋರ್ಟ್ ಗ್ರ್ಯಾನ್ಸ್ಲಾಮ್ ಟೂರ್ನಿಯು ಮೇ 24ರಿಂದ ಆರಂಭವಾಗಲಿದೆ.




