ಫ್ರೆಂಚ್ ಓಪನ್: ಕೊಕೊ ಗೌಫ್ ಸೆಮಿ ಫೈನಲ್ ಗೆ

ಕೊಕೊ ಗೌಫ್ | PC : X
ಪ್ಯಾರಿಸ್: ಮೊದಲ ಸೆಟ್ ಸೋಲಿನಿಂದ ಹೊರಬಂದಿರುವ ಅಮೆರಿಕದ ಆಟಗಾರ್ತಿ ಕೊಕೊ ಗೌಫ್ ಅವರು ಫ್ರೆಂಚ್ ಓಪನ್ನಲ್ಲಿ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕದ ಗೌಫ್ ಅವರು ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಮ್ಯಾಡಿಸನ್ ಕೀಸ್ರನ್ನು 6-7(6), 6-4, 6-1 ಸೆಟ್ಗಳ ಅಂತರದಿಂದ ಮಣಿಸಿದರು. ಈ ಮೂಲಕ 3ನೇ ಬಾರಿ ಸೆಮಿ ಫೈನಲ್ಗೆ ಪ್ರವೇಶಿಸಿದರು.
ಗೌಫ್ 2023ರ ಯು.ಎಸ್. ಓಪನ್ ಪ್ರಶಸ್ತಿಯನ್ನು ಜಯಿಸಿದ್ದರು. 2022ರ ಫ್ರೆಂಚ್ ಓಪನ್ನಲ್ಲಿ ರನ್ನರ್ಸ್ ಅಪ್ ಆಗಿದ್ದರು.
ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಮತ್ತೊಂದು ಫೈನಲ್ ತಲುಪಲು ಗೌಫ್ ಅವರು ಗುರುವಾರ ನಡೆಯಲಿರುವ ಅಂತಿಮ-4ರ ಪಂದ್ಯದಲ್ಲಿ ಲುಯಿಸ್ ಬೋಯ್ಸನ್ರನ್ನು ಎದುರಿಸಲಿದ್ದಾರೆ.
ಸುಮಾರು 2 ಗಂಟೆಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಫ್ರಾನ್ಸ್ ಆಟಗಾರ್ತಿ ಬೋಯ್ಸನ್ ಅವರು ವಿಶ್ವದ ನಂ.6ನೇ ಆಟಗಾರ್ತಿ ಮಿರ್ರಾ ಆಂಡ್ರೀವಾ ಅವರನ್ನು 7-6(8/6), 6-3 ಸೆಟ್ಗಳ ಅಂತರದಿಂದ ಸೋಲಿಸಿದ್ದಾರೆ.
ಈಗಾಗಲೇ ಅಮೆರಿಕದ ಜೆಸ್ಸಿಕಾ ಪೆಗುಲಾರನ್ನು ಮಣಿಸಿರುವ 22ರ ಹರೆಯದ ಬೋಯ್ಸನ್ ಅವರು ಕಳೆದ ವರ್ಷದ ಸೆಮಿ ಫೈನಲಿಸ್ಟ್ ಆಂಡ್ರೀವಾಗೆ ಸೋಲಿನ ಕಹಿ ಉಣಿಸಿದರು.







