ಗಬ್ಬಾ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಭಾರತ ಮೊನಚಿನ ದಾಳಿ

PC: x.com/ABHISTRONG
ಬ್ರಿಸ್ಬೇನ್: ಬಾರ್ಡರ್- ಗಾವಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ ಮೊನಚಿನ ಬೌಲಿಂಗ್ ದಾಳಿ ನಡೆಸಿದ್ದು, ಅತಿಥೇಯ ತಂಡ 39 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿದೆ.
ಟ್ರಾವಿಸ್ ಹೆಡ್ 15 ರನ್ ಗಳೊಂದಿಗೆ ಹಾಗೂ ಸ್ಟೀವನ್ ಸ್ಮಿತ್ 23 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ. ಮಳೆಯಿಂದ ಭಾದಿತವಾದ ಪಂದ್ಯದ ಮೊದಲ ದಿನ ವಿಕೆಟ್ ನಷ್ಟವಿಲ್ಲದೇ 28 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಜಸ್ಪ್ರೀತ್ ಬೂಮ್ರಾ ಆರಂಭದಲ್ಲೇ ಆಘಾತ ನೀಡಿದರು. 21 ರನ್ ಗಳಿಸಿದ್ದ ಉಸ್ಮಾನ್ ಖ್ವಾಜಾ ಅವರು ರಿಷಭ್ ಪಂತ್ ಗೆ ಕ್ಯಾಚ್ ನೀಡಿದರೆ, ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಮೆಕ್ಸ್ವೀನಿ ಕೊಹ್ಲಿಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಅಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತ್ತು.
ಮರ್ನುಸ್ ಲಬುಶೆನ್ (12ರನ್) ಅಪಾಯಕಾರಿಯಾಗುವ ಮೊದಲೇ ನಿತೀಶ್ ರೆಡ್ಡಿಯವರಿಗೆ ಬಲಿಯಾದರು. ನಿತೀಶ್ ರೆಡ್ಡಿ ಬೌಲಿಂಗ್ ನಲ್ಲಿ ಲಬುಶೆನ್ ಕೊಹ್ಲಿಯವರಿಗೆ ಕ್ಯಾಚ್ ನೀಡಿದರು.
ಉಭಯ ತಂಡಗಳು ಸರಣಿಯಲ್ಲಿ ತಲಾ ಒಂದು ಪಂದ್ಯಗಳನ್ನು ಗೆದ್ದುಕೊಂಡಿದ್ದು, ಐದು ಪಂದ್ಯಗಳ ಸರಣಿಯಲ್ಲಿ ಮುನ್ನಡೆಗಾಗಿ ಉಭಯ ತಂಡಗಳು ಶತಪ್ರಯತ್ನ ನಡೆಸಿವೆ.





