FIFA 2026 | ಜರ್ಮನಿಗೆ ವಿಶ್ವಕಪ್ನಲ್ಲಿ ಮೊದಲ ಶೂಟೌಟ್ ಸೋಲು: 16ರ ಘಟ್ಟ ತಲುಪಿದ ಪರಾಗ್ವೆ

Photo: x.com/LaRazon_Bolivia
ಬೋಸ್ಟನ್: ಬಲಿಷ್ಠ ಜರ್ಮನಿ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ 4-3 ಗೋಲುಗಳ ಜಯ ಸಾಧಿಸಿದ ಪರುಗ್ವೇ ತಂಡ ಫಿಫಾ ವಿಶ್ವಕಪ್ನ ಅಂತಿಮ 16ರ ಘಟ್ಟಕ್ಕೆ ಮುನ್ನಡೆದಿದೆ. ನಿಗದಿತ ಅವಧಿಯಲ್ಲಿ 1-1 ಡ್ರಾ ಆದ ಬಳಿಕ ಫಲಿತಾಂಶ ನಿರ್ಧರಿಸಲು ಶೂಟೌಟ್ಗೆ ಮೊರೆಹೋಗಲಾಯಿತು. ಟೂರ್ನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ಕು ಬಾರಿಯ ಚಾಂಪಿಯನ್ನರು ಶೂಟೌಟ್ನಲ್ಲಿ ಸೋಲು ಅನುಭವಿಸಿದರು.
ಸುಮಾರು 120 ನಿಮಿಷಗಳಿಗೂ ಅಧಿಕ ಅವಧಿಗೆ ವಿಸ್ತರಿಸಲ್ಪಟ್ಟ ಪಂದ್ಯದಲ್ಲಿ ಜ್ಯೂಲಿಯನ್ ನಗೇಲ್ಸ್ಮನ್ ಪ್ರಾಬಲ್ಯ ಸ್ಥಾಪಿಸಿ ಶೇಕಡ 75ರಷ್ಟು ಚೆಂಡಿನ ಸ್ವಾಧೀನ ಹೊಂದಿದ್ದರು. ಶೇಕಡ 92ರಷ್ಟು ನಿಖರತೆಯೊಂದಿಗೆ 753 ಪಾಸ್ಗಳನ್ನು ನೀಡಿದ ಅವರು, 7 ಬಾರಿ ಗುರಿಯತ್ತ ಸೇರಿದಂತೆ 21 ಶಾಟ್ಗಳ ಮೂಲಕ ಗಮನ ಸೆಳೆದರು. ಆದಾಗ್ಯೂ ಪರಾಗ್ವೆ ತಂಡದ ಅದ್ಭುತ ರಕ್ಷಣಾ ಕೋಟೆ ಹಾಗೂ ಪೆನಾಲ್ಟಿ ಅವಧಿಯಲ್ಲಿ ಒರ್ಲಾಂಡೊ ಗಿಲ್ ತೋರಿದ ಅದ್ಭುತ ಗೋಲ್ಕೀಪಿಂಗ್ ಕೌಶಲದಿಂದ ಗುಸ್ಟಾವೊ ಅಲ್ಫರೊ ತಂಡ ಅಂತಿಮ 16ರ ಹಂತಕ್ಕೆ ಮುನ್ನಡೆಯಿತು. ಪರುಗ್ವೇ ತಂಡ ಜುಲೈ 4ರಂದು ನಡೆಯುವ 16ರ ಘಟ್ಟದ ಪಂದ್ಯದಲ್ಲಿ ಫ್ರಾನ್ಸ್ ಅಥವಾ ಸ್ವೀಡನ್ ತಂಡವನ್ನು ಎದುರಿಸಲಿದೆ.
2014ರ ಚಾಂಪಿಯನ್ ತಂಡ ಮತ್ತೊಮ್ಮೆ ಆರಂಭಿಕ ಹಂತದಲ್ಲೇ ಮುಗ್ಗರಿಸಿದ್ದು, ಶ್ರೇಷ್ಠ ತಂಡಗಳ ಸಾಲಿನಲ್ಲಿ ಸೇರಲು ಜರ್ಮನಿ ವಿಫಲವಾಗಿದೆ. ಕ್ಯುರಾಕೊವಾ ಮತ್ತು ಐವರಿಕೋಸ್ಟ್ ವಿರುದ್ಧ ಇ ಗುಂಪಿನಲ್ಲಿ ಜಯ ಸಾಧಿಸಿ ಅಗ್ರಸ್ಥಾನಿಯಾಗಿ ನಾಕೌಟ್ ಪ್ರವೇಶಿಸಿದ್ದ ಜರ್ಮನಿ ಈ ಸುತ್ತಿನಲ್ಲಿ ಫೇವರಿಟ್ ತಂಡವಾಗಿತ್ತು. ಗುಂಪು ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತೃತೀಯ ಸ್ಥಾನಿ ತಂಡಗಳ ಪೈಕಿ ಒಂದಾಗಿ ಪರುಗ್ವೇ 32ರ ಘಟ್ಟ ತಲುಪಿತ್ತು.




