GOAT Tour | ಕೋಲ್ಕತ್ತಾಗೆ ಫುಟ್ಬಾಲ್ ತಾರೆ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಆಗಮನ

ಲಿಯೋನೆಲ್ ಮೆಸ್ಸಿ | Photo Credit : X
ಕೋಲ್ಕತ್ತಾ, ಡಿ. 13: ಅರ್ಜೆಂಟೀನಾ ಫುಟ್ಬಾಲ್ ದಂತಕಥೆ ಹಾಗೂ 2022ರ ಫಿಫಾ ವಿಶ್ವಕಪ್ ವಿಜೇತ ಲಿಯೋನೆಲ್ ಮೆಸ್ಸಿ ತಮ್ಮ ಬಹು ನಿರೀಕ್ಷಿತ ‘GOAT Tour’ ಅಂಗವಾಗಿ ಶನಿವಾರ ಬೆಳಗಿನ ಜಾವ 2.30ಕ್ಕೆ ಕೋಲ್ಕತ್ತಾಗೆ ಬಂದಿಳಿದರು. ಮೂರು ದಿನಗಳ ಭಾರತ ಪ್ರವಾಸದ ಮೊದಲ ಹಂತವಾಗಿ ಅವರು ಕೋಲ್ಕತ್ತಾದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೆಸ್ಸಿ ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ಫುಟ್ಬಾಲ್ ಅಭಿಮಾನಿಗಳಲ್ಲಿ ಅಪಾರ ಸಂಭ್ರಮ ಮನೆ ಮಾಡಿದೆ. ಕೋಲ್ಕತ್ತಾ ಪ್ರವಾಸದ ಪ್ರಮುಖ ಆಕರ್ಷಣೆಯಾಗಿ ವಿವೇಕಾನಂದ ಯುವ ಭಾರತಿ ಕ್ರಿರಂಗನ್ (ವಿವೈಬಿಕೆ) ಕ್ರೀಡಾಂಗಣದಲ್ಲಿ ಮೆಸ್ಸಿಯ 70 ಅಡಿ ಎತ್ತರದ ದೈತ್ಯ ಪ್ರತಿಮೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಸಮಾರಂಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಭಾರತೀಯ ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ ಹಾಗೂ ಬಾಲಿವುಡ್ ನಟ ಶಾರುಖ್ ಖಾನ್ ಉಪಸ್ಥಿತರಿರುವ ನಿರೀಕ್ಷೆಯಿದೆ. ಜಾಗತಿಕ ಫುಟ್ಬಾಲ್ ಐಕಾನ್ ಆಗಿರುವ ಮೆಸ್ಸಿಯ ಗೌರವಕ್ಕೆ ನಗರದಾದ್ಯಂತ ವಿಶೇಷ ಸ್ವಾಗತ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಕೋಲ್ಕತ್ತಾದ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕ ಮೆಸ್ಸಿ ಹೈದರಾಬಾದ್ಗೆ ತೆರಳಲಿದ್ದಾರೆ. ಅವರ ಭಾರತ ಪ್ರವಾಸವು ದೇಶದ ಫುಟ್ಬಾಲ್ ಅಭಿಮಾನಿಗಳಿಗೆ ಸ್ಮರಣೀಯ ಕ್ಷಣವಾಗಿದ್ದು, ಕ್ರೀಡಾ ಲೋಕದಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ.







