ಗ್ರ್ಯಾಂಡ್ ಚೆಸ್ ಟೂರ್: ರ‍್ಯಾಪಿಡ್ ವಿಭಾಗದಲ್ಲಿ ಗುಕೇಶ್ ಗೆ 4ನೇ ಸ್ಥಾನ

ಸೇಂಟ್ ಲೂಯಿಸ್, ಆ.14: ಗ್ರ್ಯಾಂಡ್ ಚೆಸ್ ಟೂರ್ ಸ್ಪರ್ಧೆಯಲ್ಲಿ ರ‍್ಯಾಪಿಡ್ ವಿಭಾಗದಲ್ಲಿ ಕೊನೆಯ ದಿನದಂದು ಭಾರತದ ಡಿ.ಗುಕೇಶ್ ಅವರು 6ನೇ ಸ್ಥಾನದಿಂದ 4ನೇ ಸ್ಥಾನಕ್ಕೇರಿದ್ದಾರೆ.
ಕ್ಲಾಸಿಕಲ್ ಚೆಸ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿರುವ ಗುಕೇಶ್ ಅವರು ಬುಧವಾರ ಕೊನೆಯ ಮೂರು ಸುತ್ತುಗಳಲ್ಲಿ ಅಮೆರಿಕದ ಮೂವರು ಸ್ಪರ್ಧಿಗಳನ್ನ್ನು ಎದುರಿಸಿದ್ದರು.
ಬಿಳಿ ಕಾಯಿಯೊಂದಿಗೆ ಲೀನಿಯರ್ ಡೊಮಿಂಗ್ಯೂಝ್ ವಿರುದ್ಧ ಆಡಿ ಸೋಲನುಭವಿಸಿದ ಗುಕೇಶ್ ಅವರು ವೆಸ್ಲಿ ಸೋ ಹಾಗೂ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿ ಪುಟಿದೆದ್ದರು.
ಗುಕೇಶ್ ಅವರು 10 ಅಂಕಗಳನ್ನು ಗಳಿಸಿದ್ದು, ಮ್ಯಾಕ್ಸಿಮ್ ವಾಚಿಯರ್-ಲಾಗ್ರೇವ್(11 ಅಂಕಗಳು),ಲೆವೊನ್ ಅರೋನಿಯನ್(13 ಅಂಕಗಳು) ಹಾಗೂ ಕರುವಾನಾ(14 ಅಂಕಗಳು)ಅವರಿಗಿಂತ ಹಿಂದಿದ್ದಾರೆ.
Next Story





