ನ್ಯಾಟ್ ಸ್ಕಿವರ್ ಸ್ಫೋಟಕ ಬ್ಯಾಟಿಂಗ್ ಗೆ ನೆಲಕಚ್ಚಿದ ಗುಜರಾತ್ ಜೈಂಟ್ಸ್
ಗುಜರಾತ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 5 ವಿಕೆಟ್ ಗಳ ಜಯ

pc | x
ವಡೋದರಾ: ಇಲ್ಲಿನ ಬಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು ವಿಕೆಟ್ ಗಳ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಯಲ್ಪಟ್ಟಿದ್ದ ಗುಜರಾತ್ ತಂಡವು ನಿಗಧಿತ 20 ಓವರ್ ಗಳಲ್ಲಿ ಅಲೌಟ್ ಆಗಿ 120 ರನ್ ಪೇರಿಸಿತ್ತು. ಈ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ಆರಂಭಿಕ ಅಘಾತದ ಹೊರತಾಗಿಯೂ ಪಂದ್ಯದಲ್ಲಿ ಹಿಡಿತ ಸಾಧಿಸಿತು.
ನ್ಯಾಟ್ ಸ್ಕಿವರ್-ಬ್ರಂಟ್ 57 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿ ಔಟಾದರೆ, ಅವರಿಗೆ ಸಾಥ್ ನೀಡಿದ್ದ ಅಮೆಲಿಯಾ ಕೆರ್ 18 ರನ್ ಕೊಡುಗೆ ನೀಡಿ ಕಾಶ್ವೀ ಗೌತಮ್ ಬೌಲಿಂಗ್ ನಲ್ಲಿ ಔಟಾದರು. ತಂಡದ ಪರ ಸಜೀವನ್ ಸಜನ 10 ರನ್, ಹೇಲಿ ಮ್ಯಾಥ್ಯೂಸ್ 17 ರನ್, ಯಾಸ್ತಿಕಾ ಭಾಟಿಯಾ 8 ರನ್, ಕಮಲಿನಿ ಗುಣಲನ್ 4 ರನ್ ಬಾರಿಸಿದ್ದರು.
ಗುಜರಾತ್ ಜೈಂಟ್ಸ್ ಪರ ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ ತಲಾ 2 ವಿಕೆಟ್ ಪಡೆದರೆ, ತನುಜಾ ಕನ್ವರ್ ಒಂದು ವಿಕೆಟ್ ಪಡೆದರು.
Next Story





