Rajasthan | ಮೇಣದ ಪ್ರತಿಮೆ ಅನಾವರಣಗೊಳಿಸಿದ ಹರ್ಮನ್ಪ್ರೀತ್ ಕೌರ್

Photo credit: PTI
ಜೈಪುರ, ನ. 13: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಹರ್ಮನ್ಪ್ರೀತ್ ಕೌರ್ ಶುಕ್ರವಾರ ರಾಜಸ್ಥಾನದ ನಹಾರ್ಗಢದ ವಸ್ತುಸಂಗ್ರಹಾಲಯದಲ್ಲಿ ತಮ್ಮ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ.
ಐತಿಹಾಸಿಕ ವಸ್ತುಸಂಗ್ರಹಾಲಯವು ನಿರ್ಮಿಸಿರುವ ಈ ಪ್ರತಿಮೆಯನ್ನು ಸಾರ್ವಜನಿಕರ ವೀಕ್ಷಣೆಗೆ ಇಡಲಾಗುವುದು.
ತಮ್ಮ ಮೇಣದ ಪ್ರತಿಮೆಯನ್ನು ಮೊದಲ ಬಾರಿಗೆ ನೋಡುತ್ತಿರುವುದಾಗಿ ಹೇಳಿದ ಕೌರ್, ಇದನ್ನು ನಿರ್ಮಿಸಿದ ಕಲಾವಿದರಿಗೆ ಧನ್ಯವಾದ ಅರ್ಪಿಸಿದರು.
2025ರ ನವೆಂಬರ್ನಲ್ಲಿ ಕೌರ್ ಅವರ ನಾಯಕತ್ವದಲ್ಲಿ ಭಾರತವು ಮಹಿಳಾ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಈ ಐತಿಹಾಸಿಕ ಗೆಲುವಿನ ನಂತರ, ಜೈಪುರ ಮೇಣದ ವಸ್ತುಸಂಗ್ರಹಾಲಯವು ಅವರ ಮೇಣದ ಪ್ರತಿಮೆಯನ್ನು ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಿತ್ತು.
Next Story




