ರಣಜಿ ಟ್ರೋಫಿ ಫೈನಲ್ | ಇತಿಹಾಸ ನಿರ್ಮಿಸಿದ ಸ್ಪಿನ್ನರ್ ಹರ್ಷ ದುಬೆ

ಹರ್ಷ ದುಬೆ | PTI
ನಾಗ್ಪುರ: ಕೇರಳ ತಂಡದ ವಿರುದ್ಧ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವು ಮೊದಲ ಇನಿಂಗ್ಸ್ನಲ್ಲಿ ನಿರ್ಣಾಯಕ 37 ರನ್ ಮುನ್ನಡೆ ಪಡೆದಿದ್ದು, ಈ ಪಂದ್ಯವು ಕೆಲವು ವೈಯಕ್ತಿಕ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದಲ್ಲದೆ, ದಾಖಲೆಗಳು ಪತನಗೊಂಡಿವೆ.
ವಿದರ್ಭ ತಂಡದ ಯುವ ಎಡಗೈ ಸ್ಪಿನ್ನರ್ ಹರ್ಷ ದುಬೆ ರಣಜಿ ಟ್ರೋಫಿಯ ಒಂದೇ ಋತುವಿನಲ್ಲಿ ಗರಿಷ್ಠ ವಿಕೆಟ್ಗಳನ್ನು ಉರುಳಿಸಿ ಇತಿಹಾಸ ನಿರ್ಮಿಸಿದರು. ಇನಿಂಗ್ಸ್ನಲ್ಲಿ 88 ರನ್ ವೆಚ್ಚಕ್ಕೆ 3 ವಿಕೆಟ್ಗಳನ್ನು ಪಡೆದು ಒಟ್ಟು 69 ವಿಕೆಟ್ಗಳನ್ನು ಸಂಪಾದಿಸಿದರು. ಈ ಮೂಲಕ ಬಿಹಾರದ ಅಶುತೋಷ್ ಅಮನ್(68 ವಿಕೆಟ್)ನಿರ್ಮಿಸಿದ್ದ ದಾಖಲೆಯನ್ನು ಮುರಿದರು.
Next Story





