2025-26ರ ಸಾಲಿನ ಹಾಕಿ ಪ್ರೊ ಲೀಗ್ : ಭಾರತದ ಪುರುಷರ ತಂಡದ ವೇಳಾಪಟ್ಟಿ ಪ್ರಕಟ

PC : olympics.com
ಹೊಸದಿಲ್ಲಿ, ಸೆ.17: ಭಾರತದ ಪುರುಷರ ಹಾಕಿ ತಂಡವು ಫೆಬ್ರವರಿ 11ರಂದು ಸ್ವದೇಶದಲ್ಲಿ ಬೆಲ್ಜಿಯಂ ತಂಡದ ವಿರುದ್ಧ ಆಡುವ ಮೂಲಕ ತನ್ನ 2025-26ರ ಸಾಲಿನ ಎಫ್ಐಎಚ್ ಪ್ರೊ ಲೀಗ್ ಅಭಿಯಾನವನ್ನು ಆರಂಭಿಸಲಿದೆ.
ಬೆಲ್ಜಿಯಂ ಹಾಗೂ ಅರ್ಜೆಂಟೀನ ವಿರುದ್ಧ ಭಾರತ ಸ್ವದೇಶದಲ್ಲಿ ಆಡಲಿರುವ ಪಂದ್ಯಗಳ ಸ್ಥಳವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.
ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹಾಕಿ ಪಂದ್ಯವು ಇಂಗ್ಲೆಂಡ್ನಲ್ಲಿ ಜೂನ್ 23 ಹಾಗೂ 26ರಂದು ನಡೆಯಲಿದೆ.
ಪಾಕಿಸ್ತಾನ ತಂಡವು ಪ್ರೊ ಲೀಗ್ನ ಅರ್ಹತಾ ಟೂರ್ನಿಯಾಗಿರುವ ಎಫ್ಐಎಚ್ ನೇಶನ್ಸ್ ಕಪ್ ಫೈನಲ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಸೋತಿತ್ತು. ಆದರೆ ಲೀಗ್ಗೆ ಸೇರ್ಪಡೆಯಾಗುವಂತೆ ರನ್ನರ್-ಅಪ್ ಪಾಕಿಸ್ತಾನ ತಂಡಕ್ಕೆ ಎಫ್ಐಎಚ್ ಆಹ್ವಾನ ನೀಡಿದೆ.
ಪಾಕಿಸ್ತಾನ ತಂಡವು ಐರ್ಲ್ಯಾಂಡ್ ಬದಲಿಗೆ ಪ್ರೊ ಲೀಗ್ಗೆ ಪಾದಾರ್ಪಣೆಗೈಯಲಿದೆ.
Next Story







