ಹಾಂಕಾಂಗ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಪಂದ್ಯಾವಳಿ : ಸಾತ್ವಿಕ್-ಚಿರಾಗ್ ಜೋಡಿ ಫೈನಲ್ಗೆ

ಸಾತ್ವಿಕ್ ಸಾಯಿರಾಜ್ | ಚಿರಾಗ್ ಶೆಟ್ಟಿ ( PC : X /BIA_media)
ಹಾಂಕಾಂಗ್, ಸೆ. 13: ಹಾಂಕಾಂಗ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ, ಭಾರತದ ತಾರಾ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಫೈನಲ್ ತಲುಪಿದ್ದಾರೆ. ಶನಿವಾರ ನಡೆದ ಸೆಮಿಫೈನಲ್ನಲ್ಲಿ ವಿಶ್ವದ ನಂಬರ್ 9 ಭಾರತೀಯ ಜೋಡಿಯು ಚೈನೀಸ್ ತೈಪೆಯ ಬಿಂಗ್-ವೈ ಲಿನ್ ಮತ್ತು ಚೆನ್ ಚೆಂಗ್ ಕುವಾನ್ ಜೋಡಿಯನ್ನು 21-17, 21-15 ಗೇಮ್ಗಳಿಂದ ಪರಾಭವಗೊಳಿಸಿತು.
ಇದು ಹಾಲಿ ಋತುವಿನಲ್ಲಿ ಸಾತ್ವಿಕ್ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿಯ ಮೊದಲ ಫೈನಲ್ ಆಗಿದೆ. ಇದಕ್ಕೂ ಮೊದಲು, ಈ ಜೋಡಿಯು ಆರು ಸೆಮಿಫೈನಲ್ಗಳಲ್ಲಿ ಸೋಲನುಭವಿಸಿದ್ದಾರೆ.
ಈ ಫಲಿತಾಂಶವು, ಈ ಋತುವಿನಲ್ಲಿ ಹಲವು ಹಿನ್ನಡೆಗಳನ್ನು ಅನುಭವಿಸಿದ ಬಳಿಕ ಸಾತ್ವಿಕ್ ಮತ್ತು ಚಿರಾಗ್ರಿಗೆ ಅಪ್ಯಾಯಮಾನವಾಗಿ ಮೂಡಿಬಂದಿದೆ.
ಒಂದು ವರ್ಷದ ಹಿಂದೆ, ಒಲಿಂಪಿಕ್ ಪದಕದಿಂದ ಭಾರತೀಯ ಜೋಡಿ ವಂಚಿತವಾಗಿತ್ತು. ಅವರನ್ನು ಮಲೇಶ್ಯದ ಆರೊನ್ ಚಿಯ ಮತ್ತು ಸೋ ವೂಯಿ ಯಿಕ್ ಸೋಲಿಸಿದ್ದರು. ವಿಶ್ವ ಚಾಂಪಿಯನ್ಶಿಪ್ಸ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಗೌರವವನ್ನು ಮರಳಿ ಪಡೆದುಕೊಂಡರು.





