177 ರನ್ ಸಿಡಿಸಿದ ಇಬ್ರಾಹಿಂ ಝದ್ರಾನ್ | ಚಾಂಪಿಯನ್ಸ್ ಟ್ರೋಫಿಯಲ್ಲಿ ದಾಖಲೆ

ಇಬ್ರಾಹಿಂ ಝದ್ರಾನ್ | PC : X
ರಾವಲ್ಪಿಂಡಿ: ಅಫ್ಘಾನಿಸ್ತಾನದ ಆರಂಭಿಕ ಬ್ಯಾಟರ್ ಇಬ್ರಾಹಿಂ ಝದ್ರಾನ್ ಬುಧವಾರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 177 ರನ್ಗಳನ್ನು ಸಿಡಿಸುವುದರೊಂದಿಗೆ ದಾಖಲೆಯೊಂದನ್ನು ನಿರ್ಮಿಸಿದರು.
ಇದು ಯಾವುದೇ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ.
ತನ್ನ ಭವ್ಯ ಬ್ಯಾಟಿಂಗ್ ಮೂಲಕ ಝದ್ರಾನ್ ತಂಡಕ್ಕೆ ಅತ್ಯುತ್ತಮ ಅಡಿಪಾಯವನ್ನು ಹಾಕಿ ತಂಡದ ಮೊತ್ತವು 7 ವಿಕೆಟ್ಗಳ ನಷ್ಟಕ್ಕೆ 325 ಆಗುವಂತೆ ನೋಡಿಕೊಂಡರು.
ಒಂದು ಹಂತದಲ್ಲಿ ತಂಡವು ಒಂಭತ್ತು ಓವರ್ಗಳ ಒಳಗೆ 37 ರನ್ಗಳನ್ನು ಗಳಿಸುವಷ್ಟರಲ್ಲಿ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಝದ್ರಾನ್ ಪಂದ್ಯದ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಂಡರು.
ಅವರು ನಾಯಕ ಹಶ್ಮಿತುಲ್ಲಾ ಶಾಹಿದಿ ಜೊತೆಗೆ ನಾಲ್ಕನೇ ವಿಕೆಟ್ಗೆ 103 ರನ್ಗಳ ಭಾಗೀದಾರಿಕೆ ನಿಭಾಯಿಸಿದರು. ಬಳಿಕ ಅವರು ಮುಹಮ್ಮದ್ ನಬಿ ಜೊತೆಗೆ ಸೇರಿಕೊಂಡು ಆರನೇ ವಿಕೆಟ್ಗೆ 111 ರನ್ಗಳನ್ನು ಕೂಡಿಸಿದರು.
ಇಂಗ್ಲೆಂಡ್ ಬೌಲಿಂಗನ್ನು ಛಿದ್ರಗೊಳಿಸಿದ 23 ವರ್ಷದ ಝದ್ರಾನ್ ತನ್ನ ಹಿಂದಿನ ಗರಿಷ್ಠ ಏಕದಿನ ಮೊತ್ತ 162ನ್ನು ದಾಟಿದರು. ಅಂತಿಮವಾಗಿ ಅವರು 146 ಎಸೆತಗಳಲ್ಲಿ 12 ಬೌಂಡರಿಗಳು ಮತ್ತು ಆರು ಸಿಕ್ಸರ್ಗಳನ್ನು ಒಳಗೊಂಡ 177 ರನ್ಗಳನ್ನು ಸಿಡಿಸಿದರು.
ಅಫ್ಘಾನಿಸ್ತಾನದ ಗರಿಷ್ಠ ಏಕದಿನ ರನ್ ಗಳಿಕೆದಾರ ಎಂಬ ತನ್ನದೇ ದಾಖಲೆಯನ್ನು ಮುರಿದದ್ದಲ್ಲದೆ, ಕೆಲ ದಿನಗಳ ಹಿಂದೆ ಇಂಗ್ಲೆಂಡ್ನ ಬೆನ್ ಡಕೆಟ್ ನಿರ್ಮಿಸಿದ್ದ ಚಾಂಪಿಯನ್ಸ್ ಟ್ರೋಫಿಯ ಗರಿಷ್ಠ ರನ್ ಗಳಿಕೆದಾರನ ದಾಖಲೆಯನ್ನೂ ಮುರಿದರು. ಡಕೆಟ್ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ 165 ರನ್ಗಳನ್ನು ಗಳಿಸಿದ್ದರು.
ಇದು ಝದ್ರಾನ್ರ ಏಳನೇ ಏಕದಿನ ಶತಕವಾಗಿದೆ. ಅಂತಿಮವಾಗಿ ಝದ್ರಾನ್, ಲಿಯಮ್ ಲಿವಿಂಗ್ಸ್ಟೋನ್ಗೆ ವಿಕೆಟ್ ಒಪ್ಪಿಸಿ ಮರಳಿದರು
ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ ಗರಿಷ್ಠ ವೈಯಕ್ತಿಕ ಮೊತ್ತಗಳು
1. ಇಬ್ರಾಹೀಮ್ ಝದ್ರಾನ್ (ಅಫ್ಘಾನಿಸ್ತಾನ)- 177- ಗಿs ಇಂಗ್ಲೆಂಡ್- ಲಾಹೋರ್- 2025
2. ಬೆನ್ ಡಕೆಟ್ (ಇಂಗ್ಲೆಂಡ್)- 165- ಗಿs ಆಸ್ಟ್ರೇಲಿಯ- ಲಾಹೊರ್- 2025
3. ನತಾನ್ ಆ್ಯಸಲ್ (ನ್ಯೂಝಿಲ್ಯಾಂಡ್)- 145 (ಅಜೇಯ)- ಗಿs ಅಮೆರಿಕ- ದ ಓವಲ್- 2004
4. ಆ್ಯಂಡಿ ಫ್ಲವರ್ (ಜಿಂಬಾಬ್ವೆ)- 145- ಗಿs ಭಾರತ- ಕೊಲಂಬೊ- 2002
5. ಸೌರವ್ ಗಂಗುಲಿ (ಭಾರತ)- 141 (ಅಜೇಯ)- ಗಿs ದಕ್ಷಿಣ ಆಫ್ರಿಕ- ನೈರೋಬಿ- 2000
6. ಸಚಿನ್ ತೆಂಡುಲ್ಕರ್ (ಭಾರತ)- 141- ಗಿs ಆಸ್ಟ್ರೇಲಿಯ- ಢಾಕಾ- 1998
7. ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕ)- 141- ಗಿs ಇಂಗ್ಲೆಂಡ್- ಸೆಂಚೂರಿಯನ್- 2009







