ಐಸಿಸಿ ರ್ಯಾಂಕಿಂಗ್: ರವಿ ಬಿಷ್ಣೋಯಿ ವಿಶ್ವದ ನಂ. 1 ಟಿ20 ಬೌಲರ್

ರವಿ ಬಿಷ್ಣೋಯಿ (PTI)
ದುಬೈ: ಭಾರತದ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಅವರು ಐಸಿಸಿಟಿ 20 ಇಂಟರ್ ನ್ಯಾಷನಲ್ ಬೌಲಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾದೆದುರು ಅವರು ಇತ್ತೀಚೆಗೆ ಸರಣಿ ಶ್ರೇಷ್ಠರಾಗಿ ಹೊರಹೊಮ್ಮಿದ್ದರು.
23 ವರ್ಷದ ರವಿ ಅವರು ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಐದು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಪಡೆದಿದ್ದಾರೆ. ಒಟ್ಟು 699 ರೇಟಿಂಗ್ ಪಾಯಿಂಟ್ಗಳನ್ನು ಹೊಂದಿರುವ ರವಿ ಬಿಷ್ಣೋಯಿ ಐದು ಸ್ಥಾನ ಮುಂದಕ್ಕೆ ಸಾಗಿ 692 ಪಾಯಿಂಟ್ಗಳನ್ನು ಹೊಂದಿರುವ ರಶೀದ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ. ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಮತ್ತು ಇಂಗ್ಲೆಂಡ್ನ ಆದಿಲ್ ರಶೀದ್ ಇಬ್ಬರೂ 679 ಪಾಯಿಂಟ್ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ ಶ್ರೀಲಂಕಾದ ಮಹೇಶ್ ತೀಕ್ಷಣ 677 ಪಾಯಿಂಟ್ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ಐಸಿಸಿ ಟಿ20 ಪಟ್ಟಿಯಲ್ಲಿ ಟಾಪ್ 10ರಲ್ಲಿರುವ ಏಕೈಕ ಭಾರತೀಯ ಬೌಲರ್ ರವಿ ಬಿಷ್ಣೋಯಿ ಆಗಿದ್ದಾರೆ. ಇನ್ನೊಬ್ಬ ಭಾರತೀಯ ಬೌಲರ್ ಅಕ್ಷರ್ ಪಟೇಲ್ 18ನೇ ಸ್ಥಾನದಲ್ಲಿದ್ದಾರೆ.
ಐಸಿಸಿಟಿ20 ಬ್ಯಾಟರ್ ಪಟ್ಟಿಯಲ್ಲಿ ನಲ್ಲಿ ಆಸ್ಟ್ರೇಲಿಯಾದೆದುರಿನ ಟಿ20 ಸರಣಿಯ ಕಪ್ತಾನ ಸೂರ್ಯಕುಮಾರ್ ಯಾದವ್ ಅಗ್ರ ಸ್ಥಾನದಲ್ಲಿದ್ದರೆ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಅವರು ಏಳನೇ ಸ್ಥಾನದಲ್ಲಿದ್ದಾರೆ.
ಆಲ್ರೌಂಡರ್ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ಮೂರನೇ ಸ್ಥಾನದಲ್ಲಿದ್ದಾರೆ.





