ಕ್ರಿಕೆಟ್ ಕೆನಡಾಕ್ಕೆ ಆರ್ಥಿಕ ನೆರವು ಸ್ಥಗಿತಗೊಳಿಸಿದ ICC; ಕಾರಣವೇನು?

Photo Credit : icc-cricket.com
ಹೊಸದಿಲ್ಲಿ: ಆಡಳಿತಕ್ಕೆ ಸಂಬಂಧಿಸಿದ ಕಳವಳದಿಂದಾಗಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಕ್ರಿಕೆಟ್ ಕೆನಡಾಕ್ಕೆ ಮುಂದಿನ ಆರು ತಿಂಗಳ ಕಾಲ ಹಣಕಾಸು ನೆರವು ಒದಗಿಸುವುದನ್ನು ಸ್ಥಗಿತಗೊಳಿಸಿದೆ ಎಂದು espncricinfo.com ವರದಿ ಮಾಡಿದೆ. ಈ ಕ್ರಮವು ಅಸೋಸಿಯೇಟ್ ಸದಸ್ಯ ಮಂಡಳಿಗೆ ಭಾರೀ ಆರ್ಥಿಕ ಹೊಡೆತವನ್ನು ನೀಡಿದೆ. ಕೆನಡಾ ಕ್ರಿಕೆಟ್ ಮಂಡಳಿಯು ತನ್ನ ಕಾರ್ಯಗಳಿಗೆ ಐಸಿಸಿ ನಿಧಿಯನ್ನು ಹೆಚ್ಚು ಅವಲಂಬಿಸಿದೆ.
ಈ ಕ್ರಮದಿಂದಾಗಿ, ರಾಷ್ಟ್ರೀಯ ತಂಡದ ಕಾರ್ಯಕ್ರಮಗಳು ಹಾಗೂ ಉನ್ನತ ಕಾರ್ಯಕ್ಷಮತೆಯ ಕಾರ್ಯಾಚರಣೆಗಳು ಸೇರಿದಂತೆ ಕ್ರಿಕೆಟ್ ಕೆನಡಾದ ಕ್ರಿಕೆಟ್ ಚಟುವಟಿಕೆಗಳ ಮೇಲೆ ತಕ್ಷಣದ ಪರಿಣಾಮಬೀರುವ ನಿರೀಕ್ಷೆ ಇಲ್ಲ.
ಕ್ರಿಕೆಟ್ ಕೆನಡಾವು ಮೇ 9 ಹಾಗೂ 10ರಂದು ತನ್ನ ವಾರ್ಷಿಕ ಪ್ರಧಾನ ಸಭೆಯನ್ನು ಆಯೋಜಿಸಿದ ಬೆನ್ನಿಗೇ ಐಸಿಸಿಯಿಂದ ಈ ನಿರ್ಧಾರ ಬಂದಿದೆ.
Next Story




