ICC T20 ರ್ಯಾಂಕಿಂಗ್: ಸಿಕಂದರ್ ರಝಾ ವಿಶ್ವದ ನಂ.1 ಆಲ್ರೌಂಡರ್

ಸಿಕಂದರ್ ರಝಾ | Photo Credit ; @SRazaB24
ದುಬೈ, ಫೆ.11: ಝಿಂಬಾಬ್ವೆ ಕ್ರಿಕೆಟ್ ತಂಡದ ನಾಯಕ ಸಿಕಂದರ್ ರಝಾ ಬುಧವಾರ ಬಿಡುಗಡೆಯಾದ ಪುರುಷರ ಟಿ-20 ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನವನ್ನು ವಶಪಡಿಸಿಕೊಂಡಿದ್ದು, ಪಾಕಿಸ್ತಾನದ ಸಯೀಮ್ ಅಯ್ಯೂಬ್ ನಂ.1 ಆಲ್ರೌಂಡರ್ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಈಗ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಝಿಂಬಾಬ್ವೆ ತಂಡವು ಒಮಾನ್ ವಿರುದ್ಧ ಸುಲಭ ಗೆಲುವು ದಾಖಲಿಸುವಲ್ಲಿ ರಝಾ ನೆರವಾಗಿದ್ದರು. ಆಲ್ರೌಂಡರ್ ರಝಾ ನಾಲ್ಕು ಓವರ್ಗಳಲ್ಲಿ 17 ರನ್ಗೆ ಒಂದು ವಿಕೆಟ್ ಪಡೆದಿದ್ದರು. ಗೆಲುವಿನ ರನ್ ದಾಖಲಿಸಿ ಝಿಂಬಾಬ್ವೆಗೆ ಎಂಟು ವಿಕೆಟ್ಗಳ ಗೆಲುವು ತಂದುಕೊಟ್ಟಿದ್ದರು.
ಅಮೆರಿಕ ವಿರುದ್ಧ ಟಿ-20 ವಿಶ್ವಕಪ್ ಪಂದ್ಯದಲ್ಲಿ 73 ರನ್ ಗಳಿಸಿದ್ದ ಪಾಕಿಸ್ತಾನದ ಆರಂಭಿಕ ಬ್ಯಾಟರ್ ಸಾಹಿಬ್ಝದಾ ಫರ್ಹಾನ್ ಟಿ-20 ಬ್ಯಾಟರ್ಗಳ ಪಟ್ಟಿಯಲ್ಲಿ ಏಳನೇ ಸ್ಥಾನದಿಂದ ಮೂರನೇ ಸ್ಥಾನಕ್ಕೇರಿದ್ದಾರೆ.
ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಟಿ-20 ಬ್ಯಾಟರ್ಗಳ ಐಸಿಸಿ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಪ್ರಸಕ್ತ ವಿಶ್ವಕಪ್ನಲ್ಲಿ ಸತತ ಅರ್ಧಶತಕಗಳನ್ನು ಗಳಿಸಿರುವ ಕಿವೀಸ್ನ ಟಿಮ್ ಸೀಫರ್ಟ್ ಒಂದು ಸ್ಥಾನ ಮೇಲಕ್ಕೇರಿ ಎಂಟನೇ ಸ್ಥಾನ ಪಡೆದಿದ್ದಾರೆ. ಭಾರತ ತಂಡದ ಇಶಾನ್ ಕಿಶನ್ ಟಿ-20 ಬ್ಯಾಟರ್ಗಳ ಪಟ್ಟಿಯಲ್ಲಿ ಏಳು ಸ್ಥಾನಗಳ ಭಡ್ತಿ ಪಡೆದು 25ನೇ ರ್ಯಾಂಕಿಗೆ ತಲುಪಿದ್ದಾರೆ.
ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ ಟಿ-20 ಬೌಲರ್ಗಳ ರ್ಯಾಂಕಿಂಗ್ನಲ್ಲಿ ಈಗಲೂ ಅಗ್ರ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಅಬ್ರಾರ್ ಅಹ್ಮದ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ.






