ಐಸಿಸಿ ಟಿ-20 ರ್ಯಾಂಕಿಂಗ್ : 230 ಸ್ಥಾನ ಮೇಲಕ್ಕೇರಿದ ವೈಭವ್ ಸೂರ್ಯವಂಶಿ

ವೈಭವ್ ಸೂರ್ಯವಂಶಿ | Photo Credit : PTI
ದುಬೈ, ಜು.29:ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಬುಧವಾರ ಬಿಡುಗಡೆಯಾದ ಐಸಿಸಿ ಪುರುಷರ ಟಿ-20 ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ 230 ಸ್ಥಾನಗಳಲ್ಲಿ ಭಡ್ತಿ ಪಡೆದು 48ನೇ ಸ್ಥಾನ ತಲುಪಿದ್ದಾರೆ.
15ರ ವಯಸ್ಸಿನ ಸೂರ್ಯವಂಶಿ ಝಿಂಬಾಬ್ವೆ ವಿರುದ್ಧ ಇತ್ತೀಚೆಗೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 50.33ರ ಸರಾಸರಿಯಲ್ಲಿ ಎರಡು ಅರ್ಧಶತಕಗಳ ಸಹಿತ ಒಟ್ಟು 151 ರನ್ ಗಳಿಸಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಇಶಾನ್ ಕಿಶನ್ ಟಿ-20 ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ 916 ರೇಟಿಂಗ್ನೊಂದಿಗೆ ನಂ.1 ಸ್ಥಾನ ಉಳಿಸಿಕೊಂಡಿದ್ದರು.
ಏಕದಿನ ರ್ಯಾಂಕಿಂಗ್ನಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ನ್ಯೂಝಿಲ್ಯಾಂಡ್ನ ಡ್ಯಾರಿಲ್ ಮಿಚೆಲ್ರಿಂದ ನಂ.1 ಸ್ಥಾನ ಪಡೆದರು. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಪಾಕಿಸ್ತಾನ ತಂಡದ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದು ಇತಿಹಾಸ ನಿರ್ಮಿಸಿದ್ದ ವೆಸ್ಟ್ಇಂಡೀಸ್ ಆಲ್ರೌಂಡರ್ ಜಸ್ಟಿನ್ ಗ್ರೀವ್ಸ್, 8 ಸ್ಥಾನ ಮೇಲಕ್ಕೇರಿ ಟೆಸ್ಟ್ ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ 9ನೇ ಸ್ಥಾನ ತಲುಪಿದರು.




