ಐಸಿಸಿ ಟೆಸ್ಟ್ ರ್ಯಾಂಕಿಂಗ್ | ಜಾನ್ಸನ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಸ್ಟಾರ್ಕ್

ಮಿಚೆಲ್ ಸ್ಟಾರ್ಕ್ | Photo Credit : PTI
ದುಬೈ: ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸನ್ರನ್ನು ಹಿಂದಿಕ್ಕಿದ ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಐಸಿಸಿ ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದರು.
36ರ ವಯಸ್ಸಿನ ಸ್ಟಾರ್ಕ್ ಇತ್ತೀಚೆಗೆ ಕೊನೆಗೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಟ್ಟು 15 ವಿಕೆಟ್ಗಳನ್ನು ಪಡೆದು ಆಸ್ಟ್ರೇಲಿಯದ ಪರ ಗರಿಷ್ಠ ವಿಕೆಟ್ಗಳನ್ನು ಪಡೆದಿದ್ದರು.
ಆಸ್ಟ್ರೇಲಿಯ ತಂಡವು ಸರಣಿಯನ್ನು 1-2ರಿಂದ ಕಳೆದುಕೊಂಡಿದ್ದರೂ ಸ್ಟಾರ್ಕ್ ಅವರ ವೈಯಕ್ತಿಕ ಪ್ರದರ್ಶನವು ಅತ್ಯಂತ ಅಪೂರ್ವವಾಗಿದೆ. ಎಡಗೈ ವೇಗದ ಬೌಲರ್ ಸ್ಟಾರ್ಕ್ ಕೊನೆಯ ಟೆಸ್ಟ್ನಲ್ಲಿ ಒಟ್ಟು 9 ವಿಕೆಟ್ಗಳನ್ನು ಪಡೆದಿದ್ದರು. ಇದರಲ್ಲಿ ಮೊದಲ ಇನಿಂಗ್ಸ್ನ ಆರು ವಿಕೆಟ್(6/72)ಗೊಂಚಲು ಸೇರಿದೆ.
ಜಾನ್ಸನ್ ಕಳೆದ ವಾರವಷ್ಟೇ ಟೆಸ್ಟ್ ಬೌಲಿಂಗ್ ಹಾಗೂ ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನ ಪಡೆದಿದ್ದರು. ಸರಣಿಯ ಕೊನೆಯ ಪಂದ್ಯದಲ್ಲಿ ಮಿಂಚಿದ್ದ ಸ್ಟಾರ್ಕ್ ಅವರು ಆಫ್ರಿಕಾ ಬೌಲರನ್ನು ಹಿಂದಿಕ್ಕಿದ್ದಾರೆ.
ದಕ್ಷಿಣ ಆಫ್ರಿಕಾದ ಆಫ್-ಸ್ಪಿನ್ನರ್ ಸೈಮನ್ ಹಾರ್ಮರ್ 9 ಸ್ಥಾನ ಮೇಲಕ್ಕೇರಿ ಏಳನೇ ಸ್ಥಾನ ಪಡೆದಿದ್ದಾರೆ. ಹಾರ್ಮರ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 10 ವಿಕೆಟ್ ಗೊಂಚಲು ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.




