ಐಸಿಸಿ ವಿಶ್ವಕಪ್: ಸಚಿನ್ ತೆಂಡುಲ್ಕರ್ಗೆ ಗೋಲ್ಡನ್ ಟಿಕೆಟ್ ನೀಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

Photo- PTI
ಹೊಸದಿಲ್ಲಿ : ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಹಿನ್ನೆಲೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಭಾರತದ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡುಲ್ಕರ್ಗೆ ಗೋಲ್ಡನ್ ಟಿಕೆಟ್ ನೀಡಿದ್ದಾರೆ.
ಈ ಪ್ರತಿಷ್ಠಿತ ಟೂರ್ನಮೆಂಟ್ ಅಕ್ಟೋಬರ್ 5ರ ನಂತರ ನಡೆಯಲಿದೆ. ವಿಶ್ವಕಪ್ನಲ್ಲಿ 10 ತಂಡಗಳು ಭಾಗವಹಿಸಲಿದ್ದು, 10 ವಿವಿಧ ಸ್ಥಳಗಳಲ್ಲಿ ಸ್ಪರ್ಧಿಸಲಿವೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ ಟೂರ್ನಮೆಂಟ್ನ ಆರಂಭಿಕ ಹಾಗೂ ಫೈನಲ್ ಪಂದ್ಯ ಎರಡರ ಆತಿಥ್ಯವಹಿಸಲಿದೆ. 46 ದಿನಗಳ ಕಾಲ ಒಟ್ಟು 48 ಪಂದ್ಯಗಳು ನಡೆಯಲಿವೆ.
ಬಿಸಿಸಿಐನ ಇಂಡಿಯಾ ಐಕಾನ್ಗಳಿಗೆ ಗೋಲ್ಡನ್ ಟಿಕೆಟ್ ನೀಡುವ ಉಪಕ್ರಮದ ಭಾಗವಾಗಿ ತೆಂಡುಲ್ಕರ್ಗೆ ಶಾ ಅವರು ಗೋಲ್ಡನ್ ಟಿಕೆಟ್ ನೀಡುತ್ತಿರುವ ಫೋಟೊವನ್ನು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಇದು ಕ್ರಿಕೆಟ್ ಹಾಗೂ ದೇಶಕ್ಕೆ ಅವಿಸ್ಮರಣೀಯ ಕ್ಷಣ! ನಮ್ಮ ಗೋಲ್ಡನ್ ಟಿಕೆಟ್ ಫಾರ್ ಇಂಡಿಯಾ ಐಕಾನ್ಸ್ ಕಾರ್ಯಕ್ರಮದ ಭಾಗವಾಗಿ ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಭಾರತರತ್ನ ಸಚಿನ್ ತೆಂಡುಲ್ಕರ್ ಅವರಿಗೆ ಗೋಲ್ಡನ್ ಟಿಕೆಟ್ ನೀಡಿದ್ದಾರೆ. ಕ್ರಿಕೆಟ್ ಶ್ರೇಷ್ಠತೆ ಹಾಗೂ ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿರುವ ಸಚಿನ್ ತೆಂಡುಲ್ಕರ್ ಅವರ ಪಯಣವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಿದೆ. ಈಗ ಅವರು ಐಸಿಸಿ ಕ್ರಿಕೆಟ್ ವಿಶ್ವಕಪ್-2023ರ ಭಾಗವಾಗಲಿದ್ದಾರೆ. ಆಟವನ್ನು ಮೈದಾನದಲ್ಲಿ ಲೈವ್ ಆಗಿ ವೀಕ್ಷಿಸುತ್ತಾರೆ ಎಂದು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.







