"ನಾನು ಜಾನ್, ಆಸ್ಟ್ರೇಲಿಯಾದವನು, ಫೆಲೆಸ್ತೀನ್ ಅನ್ನು ಬೆಂಬಲಿಸ್ತೀನಿ"
ವಿಶ್ವಕಪ್ ಫೈನಲ್ ಪಂದ್ಯದ ನಡುವೆ ನುಗ್ಗಿದ ಅಭಿಮಾನಿಯ ಹೇಳಿಕೆ

Photo : x/@lav_narayanan
ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ವಿಶ್ವಕಪ್ ಫೈನಲ್ನಲ್ಲಿ ಭದ್ರತಾ ವ್ಯವಸ್ಥೆ ಉಲ್ಲಂಘಿಸಿ ಪಿಚ್ಗೆ ನುಗ್ಗಿ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡ ಅಭಿಮಾನಿಯನ್ನು ಪೊಲೀಸರು ಬಂಧಿಸಿ, ಚಾಂದ್ಖೇಡಾ ಪೊಲೀಸ್ ಠಾಣೆಗೆ ಕರೆದೊಯ್ದಿದಿದ್ದಾರೆ.
ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿಮಾನಿ, “"ನಾನು ಜಾನ್, ಆಸ್ಟ್ರೇಲಿಯಾದವನು, ಪ್ರತಿಭಟನೆಯ ಭಾಗವಾಗಿ ಮೈದಾನದೊಳಗೆ ಪ್ರವೇಶಿದೆ. ವಿರಾಟ್ ಕೊಹ್ಲಿಯನ್ನು ಭೇಟಿಯಾಗಬೇಕಿತ್ತು. ನಾನು ಫೆಲಸ್ತೀನ್ ಬೆಂಬಲಿಸುತ್ತೇನೆ. ಫೆಲೆಸ್ತೀನಿನ ಜನರ ಧ್ವನಿಯನ್ನು ತಿಳಿಸಬೇಕಿತ್ತು. ಹಾಗಾಗಿ ಆ ಟಿ-ಶರ್ಟ್ ಧರಿಸಿದ್ದೆ” ಎಂದು ಹೇಳಿಕೆ ನೀಡಿದ್ದಾನೆ.
ಪಂದ್ಯದ 14 ನೇ ಓವರ್ನಲ್ಲಿ, 'ಫ್ರೀ ಫೆಲೆಸ್ತೀನ್' ಟಿ-ಶರ್ಟ್ನೊಂದಿಗೆ ಅಭಿಮಾನಿ ಮೈದಾನದ ಒಳಗೆ ನುಗ್ಗಿ, ಕೊಹ್ಲಿಯನ್ನು ತಬ್ಬಿಕೊಂಡರು. ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿಗಳು ಅಭಿಮಾನಿಯನ್ನು ಮೈದಾನದಿಂದ ಹೊರ ಕರೆದೊಯ್ದರು. ಬಳಿಕ ಪಂದ್ಯ ಮತ್ತೆ ಪುನರಾರಂಭವಾಯಿತು.
#WATCH | Gujarat: The man who breached the security & entered the field during the India vs Australia Final match, says, "My name is John...I am from Australia. I entered (the field) to meet Virat Kohli. I support Palestine..." pic.twitter.com/5vrhkuJRnw
— ANI (@ANI) November 19, 2023







