2ನೇ ಅನಧಿಕೃತ ಟೆಸ್ಟ್| ಇಂಗ್ಲೆಂಡ್ ಲಯನ್ಸ್ 327 ರನ್ ಗೆ ಆಲೌಟ್; ಖಲೀಲ್ ಅಹ್ಮದ್ ಅಮೋಘ ಬೌಲಿಂಗ್

ಖಲೀಲ್ ಅಹ್ಮದ್ - Photo : PTI
ನಾರ್ಥಾಂಪ್ಟನ್, ಜೂ.8: ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್(4-70) ನೇತೃತ್ವದ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಆತಿಥೇಯ ಇಂಗ್ಲೆಂಡ್ ಲಯನ್ಸ್ ತಂಡವು ಭಾರತ ‘ಎ’ ತಂಡದ ವಿರುದ್ಧ ತನ್ನ ಮೊದಲ ಇನಿಂಗ್ಸ್ನಲ್ಲಿ 327 ರನ್ಗೆ ಆಲೌಟಾಗಿದೆ. ಭಾರತ ತಂಡವು 21 ರನ್ ಮುನ್ನಡೆ ಪಡೆಯಿತು.
3ನೇ ದಿನದಾಟವಾದ ರವಿವಾರ ಭಾರತದ ಮೊದಲ ಇನಿಂಗ್ಸ್ 348 ರನ್ಗೆ ಉತ್ತರಿಸಹೊರಟ ಇಂಗ್ಲೆಂಡ್ ಲಯನ್ಸ್ ಪರ ಎಮಿಲಿಯೊ ಗೇ(71 ರನ್, 117 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಆರಂಭಿಕ ಬ್ಯಾಟರ್ ಟಾಮ್ ಹೈನ್ಸ್(54 ರನ್, 88 ಎಸೆತ) ಹಾಗೂ ಜೋರ್ಡನ್ ಬಾಕ್ಸ್(45 ರನ್, 65 ಎಸೆತ)ಅಗ್ರ ಸರದಿಯಲ್ಲಿ ಒಂದಷ್ಟು ಹೋರಾಟ ನೀಡಿದರು.
ಮಧ್ಯಮ ಹಾಗೂ ಕೆಳ ಸರದಿಯಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು. ಜೋಸ್ ಟಾಂಗ್(ಔಟಾಗದೆ 36)89 ಓವರ್ಗಳಲ್ಲಿ 327 ರನ್ ಗಳಿಸಲು ನೆರವಾದರು.
ಭಾರತದ ಪರ ಅಹ್ಮದ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಅನ್ಶುಲ್ ಕಾಂಬೋಜ್(2-56)ಹಾಗೂ ತುಷಾರ್ ದೇಶಪಾಂಡೆ(2-62)ತಲಾ ಎರಡು ವಿಕೆಟ್ಗಳನ್ನು ಪಡೆದರು.





