ಭಾರತ vs ಶ್ರೀಲಂಕಾ ಪ್ರಥಮ ಟೆಸ್ಟ್ | ಭಾರತಕ್ಕೆ 165 ರನ್ ಗೆಲುವು

Photo credit: PTI
ಕೊಲಂಬೊ: ಇಲ್ಲಿನ ಗಾಬಾ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 165 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ನಿನ್ನೆ ನಾಲ್ಕು ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದ್ದ ಶ್ರೀಲಂಕಾ ತಂಡ, ಇಂದು ವಿಶ್ವಾಸದಿಂದಲೇ ಕಣಕ್ಕಿಳಿಯಿತು. ಧನಂಜಯ (59) ಹಾಗೂ ಸೋನಲ್ ದಿನುಶಾ (ಅಜೇಯ 65) ಜೋಡಿ ಐದನೆ ವಿಕೆಟ್ ಜೊತೆಯಾಟದಲ್ಲಿ 95 ರನ್ ಗಳ ಅಮೂಲ್ಯ ಜೊತೆಯಾಟವಾಡಿತು. ಈ ಜೋಡಿಯನ್ನು ಮುರಿಯುವಲ್ಲಿ ಯಶಸ್ವಿಯಾದ ರವೀಂದ್ರ ಜಡೇಜಾ, ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಧನಂಜಯರ ವಿಕೆಟ್ ಕಿತ್ತರು.
ಸೋನಲ್ ದಿನುಶಾ (84) ಹಾಗೂ ಧನಂಜಯ (59) ಹೊರತುಪಡಿಸಿದರೆ, ಶ್ರೀಲಂಕಾ ತಂಡದ ಬೇರೆ ಯಾವ ಬ್ಯಾಟರ್ ಗಳೂ ಪರಿಣಾಮಕಾರಿ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ.
ಎರಡನೆಯ ಇನಿಂಗ್ಸ್ ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಮಾನವ್ ಸುತಾರ್, ಕೇವಲ 55 ರನ್ ನೀಡಿ ಆರು ವಿಕೆಟ್ ಗಳನ್ನು ಕಬಳಿಸಿದರು. ಈ ಪೈಕಿ ಕೊನೆಯ ನಾಲ್ವರು ಬ್ಯಾಟರ್ ಗಳ ವಿಕೆಟ್ ಗಳನ್ನು ಅವರೊಬ್ಬರೇ ಕಿತ್ತಿದ್ದು ವಿಶೇಷವಾಗಿತ್ತು.
ಸ್ಕೋರ್ ಕಾರ್ಡ್:
ಭಾರತ ತಂಡ: 462 & 193
ಶ್ರೀಲಂಕಾ ತಂಡ: 284 & 206






