ಸಾರ್ವಕಾಲಿಕ ಬ್ಯಾಟಿಂಗ್ ದಾಖಲೆ ಮುರಿದ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ

Photo : timesofindia
ಲಂಡನ್, ಆ.3: ಒಂದೇ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳ 9 ಬ್ಯಾಟರ್ ಗಳು 400ಕ್ಕೂ ಅಧಿಕ ರನ್ ಗಳಿಸುವ ಮೂಲಕ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯು ಇತಿಹಾಸದ ಪುಸ್ತಕದಲ್ಲಿ ಸ್ಥಾನ ಪಡೆದಿದೆ.
ಇದೇ ಮೊದಲ ಬಾರಿ 9 ಬ್ಯಾಟರ್ ಗಳು ಈ ಸಾಧನೆ ಮಾಡಿದ್ದು, ಆಸ್ಟ್ರೇಲಿಯದಲ್ಲಿ(1975-76)ವೆಸ್ಟ್ಇಂಡೀಸ್ ತಂಡ ಹಾಗೂ 1993ರ ಆ್ಯಶಸ್ ಸರಣಿಯಲ್ಲಿ ದಾಖಲಾದ ದಾಖಲೆಗಳು ಪತನಗೊಂಡಿವೆ. ಈ ಎರಡು ಸರಣಿಯಲ್ಲಿ 8 ಬ್ಯಾಟರ್ ಗಳು ಈ ಮೈಲಿಗಲ್ಲು ತಲುಪಿದ್ದರು.
ರನ್ ಪಟ್ಟಿಯಲ್ಲಿ ಭಾರತದ ಬ್ಯಾಟರ್ ಗಳು ಪ್ರಾಬಲ್ಯ ಮೆರೆದಿದ್ದಾರೆ. ಭಾರತ ತಂಡದ ನಾಯಕ ಶುಭಮನ್ ಗಿಲ್ ಎಲ್ಲ 5 ಟೆಸ್ಟ್ ಪಂದ್ಯಗಳಲ್ಲಿ 754 ರನ್ ಗಳಿಸಿದ್ದಾರೆ. ಕೆ.ಎಲ್.ರಾಹುಲ್(532 ರನ್),ರವೀಂದ್ರ ಜಡೇಜ(516), ರಿಷಭ್ ಪಂತ್(479) ಹಾಗೂ ಯಶಸ್ವಿ ಜೈಸ್ವಾಲ್(411 ರನ್)ಸ್ಮರಣೀಯ ಪ್ರದರ್ಶನ ನೀಡಿದ್ದಾರೆ.
ಇಂಗ್ಲೆಂಡ್ ತಂಡದ ಪರ ಬೆನ್ ಡಕೆಟ್(462 ರನ್),ಜೋ ರೂಟ್(455*), ಜಮೀ ಸ್ಮಿತ್(432) ಹಾಗೂ ಹ್ಯಾರಿ ಬ್ರೂಕ್(408*)ಅತ್ಯುತ್ತಮ ಇನಿಂಗ್ಸ್ ಆಡಿದ್ದಾರೆ.
ಸರಣಿಯಲ್ಲಿನ ಬ್ಯಾಟಿಂಗ್ ಸ್ನೇಹಿ ಪಿಚ್ನಿಂದಾಗಿ ಇಷ್ಟೊಂದು ರನ್ ಹರಿದುಬಂದಿದೆ. ದ ಓವಲ್ ಪಿಚ್ ನಲ್ಲಿ ಮಾತ್ರ ಬೌಲರ್ ಗಳಿಗೆ ಒಂದಷ್ಟು ನೆರವು ನೀಡಿದೆ.





