ದುಲೀಪ್ ದೋಶಿ ಗೌರವಾರ್ಥ ಕಪ್ಪು ಪಟ್ಟಿ ಧರಿಸಿ ಆಡಿದ ಭಾರತ, ಇಂಗ್ಲೆಂಡ್ ಆಟಗಾರರು

Photo : BCCI- X
ಲೀಡ್ಸ್, ಜೂ.24: ಸೋಮವಾರ ತನ್ನ 77ನೇ ವಯಸ್ಸಿನಲ್ಲಿ ನಿಧನರಾಗಿರುವ ಭಾರತದ ಮಾಜಿ ಸ್ಪಿನ್ನರ್ ದುಲಿಪ್ ದೋಶಿ ಗೌರವಾರ್ಥ ಲೀಡ್ಸ್ನ ಹೆಡ್ಡಿಂಗ್ಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನ 5ನೇ ದಿನವಾದ ಮಂಗಳವಾರ ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಆಟಗಾರರು ಕೈಗೆ ಕಪ್ಪು ಧರಿಸಿ ಆಡಿದರು.
ಲಂಡನ್ನಲ್ಲಿ ಹೃದಯಾಘಾತಕ್ಕೊಳಗಾಗಿ ದುಲಿಪ್ ನಿಧನರಾಗಿದ್ದು, ತಂಡಗಳು ಒಂದು ನಿಮಿಷ ಮೌನ ಪ್ರಾರ್ಥನೆ ನಡೆಸಿದವು.
‘ಸೋಮವಾರ ನಿಧನರಾದ ಮಾಜಿ ಭಾರತೀಯ ಕ್ರಿಕೆಟಿಗ ದಿಲಿಪ್ ದೋಶಿ ಅವರ ಸ್ಮರಣಾರ್ಥ ಇಂದು ಉಭಯ ತಂಡಗಳ ಆಟಗಾರರು ಕೈಗೆ ಕಪ್ಪುಪಟ್ಟಿ ಧರಿಸಿ ಆಡಿವೆ. 5ನೇ ದಿನದಾಟ ಆರಂಭಕ್ಕೂ ಮುನ್ನ ತಂಡಗಳು ಒಂದು ನಿಮಿಷ ಮೌನ ಪ್ರಾರ್ಥನೆ ನಡೆಸಿದವು’’ ಎಂದು ಬಿಸಿಸಿಐ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಬೆಕ್ಹ್ಯಾಮ್ನ ಕೆಂಟ್ ಕೌಂಟಿ ಕ್ರಿಕೆಟ್ ಗ್ರೌಂಡ್ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಕೂಡ ಇಸಿಬಿ ಇಲೆವೆನ್ ವಿರುದ್ಧ ಆಡುವ ಮೊದಲು ಒಂದು ನಿಮಿಷ ಮೌನ ಪ್ರಾರ್ಥನೆ ನಡೆಸಿತು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಿರಿಯ ಆಟಗಾರನಿಗೆ ಗೌರವ ಸಲ್ಲಿಸಿದೆ.
‘‘ದಿಲೀಪ್ ದೋಶಿ ಅವರ ನಿಧನದ ಸುದ್ದಿ ತಿಳಿದು ನಮಗೆ ತೀವ್ರ ದುಃಖವಾಯಿತು. ಅವರು ಸ್ಪಿನ್ ಬೌಲಿಂಗ್ನ ನಿಜವಾದ ಕಲಾವಿದ. ಮೈದಾನದ ಒಳಗೆ ಹಾಗೂ ಹೊರಗೆ ಓರ್ವ ಸಜ್ಜನ ಹಾಗೂ ಭಾರತೀಯ ಕ್ರಿಕೆಟ್ನ ಸಮರ್ಪಿತ ಸೇವಕನಾಗಿದ್ದು’’ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.







