Asian Games Hockey 2026 | ಇಂಡೋನೇಶ್ಯಾ ತಂಡವನ್ನು 13-1 ಅಂತರದಲ್ಲಿ ಬಗ್ಗುಬಡಿದ ಭಾರತ

Photo Credit: olympics.com
ಟೋಕಿಯೊ: ರವಿವಾರ ನಡೆದ ಏಶ್ಯನ್ ಗೇಮ್ಸ್ ನ ಪ್ರಥಮ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ಇಂಡೋನೇಶ್ಯಾ ತಂಡವನ್ನು 13-1 ಅಂತರದಿಂದ ಬಗ್ಗುಬಡಿಯಿತು.
ಭಾರತ ತಂಡದ ಪರ ದಿಲ್ಪ್ರೀತ್ ಸಿಂಗ್ ನಾಲ್ಕು ಗೋಲುಗಳನ್ನು ಗಳಿಸಿದರೆ, ಶೀಲಾನಂದ್ ಲಾಕ್ರಾ ಹಾಗೂ ಸಖ್ಜೀತ್ ಸಿಂಗ್ ತಲಾ ಎರಡು ಗೋಲು ಹೊಡೆದರು. ಇನ್ನುಳಿದಂತೆ ಹರ್ಮನ್ ಪ್ರೀತ್ ಸಿಂಗ್, ರಾಜಿಂದರ್ ಸಿಂಗ್, ಮನ್ಪ್ರೀತ್ ಸಿಂಗ್, ಜುಗ್ರಾಜ್ ಸಿಂಗ್ ಹಾಗೂ ಅಭಿಷೇಕ್ ತಲಾ ಒಂದು ಗೋಲು ಬಾರಿಸಿದರು.
ಕಳೆದ ತಿಂಗಳು ಲ್ಯಾಕ್ ಲಸ್ಟರ್ ನಲ್ಲಿ ನಡೆದಿದ್ದ ವಿಶ್ವಕಪ್ ವೇಳೆ ಬಯಲು ಮೈದಾನದಲ್ಲಿ ಗೋಲು ಗಳಿಸಲು ಭಾರತ ತಂಡ ಪರದಾಡಿತ್ತು. ಆದರೆ, ಇಂಡೋನೇಶ್ಯಾ ವಿರುದ್ಧ ಗಳಿಸಿದ 13 ಗೋಲುಗಳ ಪೈಕಿ 10 ಗೋಲುಗಳು ಮೈದಾನದ ಗೋಲುಗಳಾಗಿದ್ದವು.
ಮೊದಲಾರ್ಧದಲ್ಲಿ ಇಂಡೋನೇಶ್ಯಾ ರಕ್ಷಣಾತ್ಮಕ ಆಟದ ಮೊರೆ ಹೋಯಿತು. ಆದರೆ, ಶೀಲಾನಂದ್ ಹಾಗೂ ಅಭಿಷೇಕ್ ಗೋಲು ಗಳಿಸಿದ ಬಳಿಕ, ಪಂದ್ಯವನ್ನು ಭಾರತ ತಂಡ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು.
ಆದರೆ, ದ್ವಿತೀಯಾರ್ಧದಲ್ಲಿ ಹರ್ಮನ್ ಪ್ರೀತ್ ಸಿಂಗ್ ನೇತೃತ್ವದ ತಂಡ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಕೇವಲ ಮೂರು ನಿಮಿಷಗಳ ಅಂತರದಲ್ಲಿ ನಾಲ್ಕು ಗೋಲು ಗಳಿಸುವ ಮೂಲಕ, ಭಾರತ ತಂಡ ಪಂದ್ಯದ ಮೇಲೆ ಸ್ಪಷ್ಟ ಮೇಲುಗೈ ಸಾಧಿಸಿತು.




