ಫಿಫಾ ರ್ಯಾಂಕಿಂಗ್: 117ನೇ ಸ್ಥಾನಕ್ಕೆ ಕುಸಿದ ಭಾರತ

AIFF Photo
Read more at:
http://timesofindia.indiatimes.com/articleshow/107727216.cms?utm_source=contentofinterest&utm_medium=text&utm_campaign=cppst
ಹೊಸದಿಲ್ಲಿ : ಎ ಎಫ್ ಸಿ ಏಶ್ಯನ್ ಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಭಾರತೀಯ ಪುರುಷರ ಫುಟ್ಬಾಲ್ ತಂಡವು ಫಿಫಾ ರ್ಯಾಂಕಿಂಗ್ ನಲ್ಲಿ ಕುಸಿತ ಕಂಡಿದೆ. ಬ್ಲ್ಯೂ ಟೈಗರ್ಸ್ ಗುರುವಾರ ಬಿಡುಗಡೆಯಾದ ರ್ಯಾಂಕಿಂಗ್ ನಲ್ಲಿ 117ನೇ ಸ್ಥಾನಕ್ಕೆ ಕುಸಿದಿದೆ.
102ನೇ ಸ್ಥಾನದಲ್ಲಿದ್ದ ಭಾರತವು 15 ಸ್ಥಾನ ಕುಸಿತವಾಗಿದೆ. ಕಳೆದ ತಿಂಗಳು ದೋಹಾದಲ್ಲಿ ನಡೆದಿದ್ದ ಎ ಎಫ್ ಸಿ ಏಶ್ಯನ್ ಕಪ್ ನಲ್ಲಿ ಭಾರತ ಮೊದಲ ಸುತ್ತಿನಲ್ಲಿ ನಿರ್ಗಮಿಸಿರುವ ಹಿನ್ನೆಲೆಯಲ್ಲಿ ಫುಟ್ಬಾಲ್ ಅಭಿಮಾನಿಗಳಿಗೆ ಇದು ಅಚ್ಚರಿ ಎನಿಸದು.
ಮೊದಲ ಬಾರಿ ಸತತ 2ನೇ ಏಶ್ಯನ್ ಕಪ್ ಆಡಿದ್ದ ಭಾರತವು ಆಸ್ಟ್ರೇಲಿಯ, ಉಝ್ಬೇಕಿಸ್ತಾನ ಹಾಗೂ ಸಿರಿಯಾ ವಿರುದ್ಧ ಆಡಿರುವ ಪಂದ್ಯಗಳಲ್ಲಿ ಒಂದೂ ಗೋಲು ಗಳಿಸದೆ ಎಲ್ಲ ಗ್ರೂಪ್ ಹಂತದ ಪಂದ್ಯಗಳನ್ನು ಸೋತಿತ್ತು. ಭಾರತ ಇದ್ದ ಗುಂಪಿನಲ್ಲಿದ್ದ ಉಳಿದೆಲ್ಲ ತಂಡಗಳು ಅಂತಿಮ-16ರ ಸುತ್ತು ತಲುಪಿದ್ದವು.
ಭಾರತವು ಈ ಹಿಂದೆ ಮುಖ್ಯ ಕೋಚ್ ಇಗೊಗ್ ಸ್ಟಿಮ್ಯಾಕ್ ಕೋಚಿಂಗ್ ನಲ್ಲಿ 2021ರಲ್ಲಿ 107ನೇ ರ್ಯಾಂಕಿಗೆ ಕುಸಿದಿತ್ತು.
ಎ ಎಫ್ ಸಿ ಕಪ್ ತನ್ನಲ್ಲೇ ಉಳಿಸಿಕೊಂಡಿದ್ದ ಖತರ್ ತಂಡ 31 ಸ್ಥಾನ ಮೇಲಕ್ಕೇರಿ 37ನೇ ರ್ಯಾಂಕಿಗೆ ತಲುಪಿದೆ. ರನ್ನರ್ಸ್ ಅಪ್ ಜೋರ್ಡನ್ 17 ಸ್ಥಾನ ಭಡ್ತಿ ಪಡೆದು 70ನೇ ರ್ಯಾಂಕ್ಗೆ ಏರಿದೆ. ಆಫ್ರಿಕನ್ ಕಪ್ ಆಫ್ ನೇಶನ್ಸ್ ಪ್ರಶಸ್ತಿ ವಿಜೇತ ಐವರಿಕೋಸ್ಟ್ ತಂಡವು 10 ಸ್ಥಾನ ಮೇಲಕ್ಕೇರಿ 39ನೇ ರ್ಯಾಂಕ್ ತಲುಪಿದೆ. 12ನೇ ರ್ಯಾಂಕಿನಲ್ಲಿರುವ ಮೊರೊಕ್ಕೊ ಆಫ್ರಿಕಾದ ಅಗ್ರ ರ್ಯಾಂಕಿನ ತಂಡವಾಗಿ ಉಳಿದುಕೊಂಡಿದೆ.







