202 ಪದಕಗಳೊಂದಿಗೆ 2023ರ ವಿಶೇಷ ಒಲಿಂಪಿಕ್ಸ್ ಅಭಿಯಾನ ಮುಗಿಸಿದ ಭಾರತ

ಹೊಸದಿಲ್ಲಿ: ಭಾರತವು 202 ಪದಕಗಳನ್ನು(76 ಚಿನ್ನ,75 ಬೆಳ್ಳಿ ಹಾಗೂ 51 ಕಂಚು)ಗೆಲ್ಲುವ ಮೂಲಕ ವಿಶೇಷ ಒಲಿಂಪಿಕ್ ವರ್ಲ್ಡ್ ಗೇಮ್ಸ್ನಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ.
ಭಾರತೀಯ ಅತ್ಲೀಟ್ಗಳು ಟ್ರ್ಯಾಕ್ ಸ್ಪರ್ಧೆಗಳಲ್ಲಿ ಆರು ಪದಕಗಳನ್ನು(2 ಚಿನ್ನ, 3 ಬೆಳ್ಳಿ, 1 ಕಂಚು)ಗೆದ್ದಿದ್ದಾರೆ.
ಚಿನ್ನದ ಪದಕಗಳನ್ನು ಜಯಿಸುವ ಮೂಲಕ ಅಂಚಲ್ ಗೋಯಲ್(400 ಮೀ., ಲೆವೆಲ್ ಬಿ ಫಿಮೇಲ್) ಹಾಗೂ ರವಿಮತಿ ಆರ್ಮುಗಮ್ (400 ಮೀ.ಲೆವೆಲ್ ಸಿ ಫಿಮೇಲ್)ಹೆಚ್ಚು ಗಮನ ಸೆಳೆದರು.
ಮಿನಿ ಜಾವೆಲಿನ್ ಲೆವೆಲ್ ಬಿನಲ್ಲಿ ಈ ಮೊದಲು ಬೆಳ್ಳಿ ಪದಕ ಜಯಿಸಿದ್ದ ಸಾಕೇತ್ ಕುಂಡು ಲೆವೆಲ್ ಬಿ 400 ಮೀ.ನಲ್ಲಿ ಕಂಚು ಜಯಿಸಿದ್ದಾರೆ. ಈ ಮೂಲಕ ಟ್ರ್ಯಾಕ್ ಆ್ಯಂಡ್ ಫೀಲ್ಡ್ನಲ್ಲಿ ಅಪರೂಪದ ಡಬಲ್ ಸಾಧನೆ ಮಾಡಿದ್ದಾರೆ.
Next Story





