ಅಂಡರ್-20 ಎಎಫ್ಸಿ ಮಹಿಳೆಯರ ಏಶ್ಯಕಪ್ಗೆ ಭಾರತ ಅರ್ಹತೆ

Photo Credit: AIFF Media
ಚೆನ್ನೈ, ಆ.10:ಯಾಂಗಾನ್ನಲ್ಲಿ ರವಿವಾರ ನಡೆದ ತನ್ನ ಕೊನೆಯ ‘ಡಿ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಮ್ಯಾನ್ಮಾರ್ ತಂಡವನ್ನು 1-0 ಅಂತರದಿಂದ ಮಣಿಸಿರುವ ಭಾರತದ ಅಂಡರ್-20 ಮಹಿಳೆಯರ ರಾಷ್ಟ್ರೀಯ ತಂಡವು 20 ವರ್ಷಗಳಲ್ಲಿ ಮೊದಲ ಬಾರಿ ಎಎಫ್ಸಿ ಅಂಡರ್-20 ಮಹಿಳೆಯರ ಏಶ್ಯಕಪ್ಗೆ ಅರ್ಹತೆ ಪಡೆದಿದೆ.
ಯುವ ಆಟಗಾರ್ತಿಯರ ಬಳಗವು 7 ಅಂಕ ಗಳಿಸಿ ತನ್ನ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದೆ.
27ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದ ಪೂಜಾ ಅವರು ಭಾರತಕ್ಕೆ ಗೆಲುವು ತಂದುಕೊಟ್ಟರು.
ಮೊದಲಾವಧಿಯಲ್ಲಿ ಭಾರತೀಯ ಆಟಗಾರ್ತಿಯರು ಪ್ರಾಬಲ್ಯ ಮೆರೆದರೆ, ಎರಡನೇ ಅವಧಿಯಲ್ಲಿ ಮ್ಯಾನ್ಮಾರ್ ಆಟಗಾರ್ತಿಯರು ಸ್ಪರ್ಧೆಯೊಡ್ಡಿದರು.
Next Story





