ಮೊದಲ ಟಿ-20: ಶ್ರೀಲಂಕಾ ವಿರುದ್ಧ ಭಾರತ ಮಹಿಳಾ ತಂಡಕ್ಕೆ 8 ವಿಕೆಟ್ ಗೆಲುವು

Photo : X/@BCCIWomen
ವಿಶಾಖಪಟ್ಟಣ: ಜೆಮಿಮಾ ರೊಡ್ರಿಸ್ ಆಕರ್ಷಕ ಬ್ಯಾಟಿಂಗ್(ಔಟಾಗದೆ 69, 44 ಎಸೆತ, 10 ಬೌಂಡರಿ), ಶಿಸ್ತುಬದ್ಧ ಬೌಲಿಂಗ್ ಹಾಗೂ ಫೀಲ್ಡಿಂಗ್ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು ಮೊದಲ ಟಿ-20 ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 8 ವಿಕೆಟ್ಗಳ ಅಂತರದಿಂದ ಮಣಿಸಿದೆ.
ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 121 ರನ್ ಗುರಿ ಪಡೆದ ಭಾರತ ತಂಡವು 14.4 ಓವರ್ಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 122 ರನ್ ಗಳಿಸಿತು. ಭಾರತ ತಂಡ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ(9 ರನ್)ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ 2ನೇ ವಿಕೆಟ್ಗೆ 54 ರನ್ ಜೊತೆಯಾಟ ನಡೆಸಿದ ಸ್ಮತಿ ಮಂಧಾನ(25 ರನ್)ಹಾಗೂ ಜೆಮಿಮಾ ರೋಡ್ರಿಗ್ಸ್ ತಂಡವನ್ನು ಆಧರಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 121 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಆಟಗಾರ್ತಿ ವಿಶ್ಮಿ ಗುಣರತ್ನೆ(39 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ಭಾರತದ ಪರ ದೀಪ್ತಿ ಶರ್ಮಾ(1-20), ಕ್ರಾಂತಿ ಗೌಡ್(1-23)ಹಾಗೂ ಶ್ರೀ ಚರಣಿ(1-30) ತಲಾ ಒಂದು ವಿಕೆಟ್ ಪಡೆದರು. ಮೂವರು ಆಟಗಾರ್ತಿಯರು ರನೌಟಾದರು.





