ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ 39 ಪದಕಗಳು : ಭಾರತೀಯ ಸೇನಾ ಸಿಬ್ಬಂದಿಗಳದ್ದೇ ಸಿಂಹಪಾಲು

Photo Credit : instagram.com
ಹೊಸದಿಲ್ಲಿ, ಆ.5: ದೇಶದ ಕಾಮನ್ವೆಲ್ತ್ ಗೇಮ್ಸ್ ಪದಕ ಪಟ್ಟಿಯಲ್ಲಿ ಭಾರತೀಯ ಸೇನಾ ಸಿಬ್ಬಂದಿಗಳು ಸಿಂಹಪಾಲು ಕೊಡುಗೆ ನೀಡಿದ್ದಾರೆ. ಭಾರತದ ಒಟ್ಟು 39 ಪದಕಗಳ ಪೈಕಿ ಭಾರತೀಯ ಸೇನಾ ಸಿಬ್ಬಂದಿಯು 16 ಪದಕಗಳನ್ನು ಗೆದ್ದಿದ್ದಾರೆ. ಇಬ್ಬರು ಭಾರತೀಯ ನೌಕಾ ಸಿಬ್ಬಂದಿ ಕೂಡ ಪದಕಗಳನ್ನು ಗೆದ್ದಿದ್ದಾರೆ.
ಆರ್ಮಿ ಹಾಗೂ ನೌಕಾ ಸಿಬ್ಬಂದಿಗಳು ಒಟ್ಟು 39 ಪದಕಗಳ ಪೈಕಿ 18 ಪದಕಗಳನ್ನು ಗೆದ್ದಿದ್ದಾರೆ. ವಿಜೇತ ಪದಕಗಳಲ್ಲಿ ಆರ್ಮಿ ಹಾಗೂ ನೌಕಾ ಸಿಬ್ಬಂದಿಗಳು ಶೇ.46ರಷ್ಟು ಕೊಡುಗೆ ನೀಡಿದ್ದಾರೆ.
‘ಭಾರತೀಯ ಸೇನೆಯ 20 ಕ್ರೀಡಾಪಟುಗಳ ತಂಡವು 16 ಪದಕಗಳನ್ನು ಜಯಿಸಿದೆ’ ಎಂದು ಸೇನೆಯು ತಿಳಿಸಿದೆ.
16 ಪದಕಗಳಲ್ಲಿ ಎಂಟು ಚಿನ್ನ, ಏಳು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳು ಸೇರಿವೆ.
‘ಎಕ್ಸ್’ ಪೋಸ್ಟ್ನಲ್ಲಿ ಸೋಮವಾರ ತನ್ನ ಸಿಬ್ಬಂದಿಯನ್ನು ಶ್ಲಾಘಿಸಿರುವ ಭಾರತೀಯ ಸೇನೆಯು, ‘‘ಹರ್ ಕಾಮ್ ದೇಶ್ ಕೆ ನಾಮ್, ಜನರಲ್ ಧೀರಜ್ ಸೇಠ್, ಸಿಒಎಎಸ್ ಹಾಗೂ ಭಾರತೀಯ ಸೇನೆಯ ಎಲ್ಲ ಶ್ರೇಣಿಗಳು ಭಾರತೀಯ ಸೇನೆಯ ಕ್ರೀಡಾಪಟುಗಳ ಅತ್ಯುತ್ತಮ ಪ್ರದರ್ಶನಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ’’ ಎಂದು ಹೇಳಿದೆ.




