ಭಾರತದ ಫುಟ್ಬಾಲ್ ದಂತಕತೆ ಮುಹಮ್ಮದ್ ಹಬೀಬ್ ನಿಧನ

ಮುಹಮ್ಮದ್ ಹಬೀಬ್ | Photo: NDTV
ಹೊಸದಿಲ್ಲಿ: ಭಾರತೀಯ ಫುಟ್ಬಾಲ್ ಇತಿಹಾಸದಲ್ಲಿ ಶ್ರೇಷ್ಠ ಆಟಗಾರ ಮುಹಮ್ಮದ್ ಹಬೀಬ್ ಮಂಗಳವಾರ ನಿಧನರಾಗಿದ್ದು, ಅವರಿಗೆ 74 ವರ್ಷ ವಯಸ್ಸಾಗಿತ್ತು. ಹಬೀಬ್ ಕಳೆದ ಎರಡು ವರ್ಷಗಳಿಂದ ಪಾರ್ಕಿನ್ಸನ್ ಸಿಂಡ್ರೋಮ್ನಿಂದ ಬಳಲುತ್ತಿದ್ದರು. ಹಬೀಬ್ ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಹಬೀಬ್ 1965-76ರ ಅವಧಿಯಲ್ಲಿ ಹಲವು ಅಂತರ್ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರನ್ನು ದೇಶ ಕಂಡ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆಂದು ಅನೇಕ ತಜ್ಞರು ಪರಿಗಣಿಸಿದ್ದಾರೆ.
1970ರ ಏಶ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ವಿಜೇತ ಭಾರತದ ತಂಡದ ಸದಸ್ಯರಾಗಿದ್ದರು.
1977ರಲ್ಲಿ ಲೆಜೆಂಡರಿ ಪೀಲೆ ಅವರನ್ನೊಳಗೊಂಡ ಕಾಸ್ಮೋಸ್ ಕ್ಲಬ್ ವಿರುದ್ಧ ಕೋಲ್ಕತಾದಲ್ಲಿ ನಡೆದ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಮೋಹನ್ ಬಗಾನ್ ತಂಡದ ಪರ ಆಡಿದ್ದು ಅವರ ವೃತ್ತಿಜೀವನದ ಮಹತ್ವದ ಭಾಗವಾಗಿದೆ.
Next Story