ಡಕೆಟ್ ವಿಕೆಟ್ ಪಡೆದು ಅಬ್ಬರದ ಸಂಭ್ರಮಾಚರಣೆ; ಭಾರತದ ವೇಗಿ ಸಿರಾಜ್ಗೆ ಪಂದ್ಯಶುಲ್ಕದಲ್ಲಿ ಶೇ.15ರಷ್ಟು ದಂಡ

PC | PTI
ದುಬೈ, ಜು.14: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ 4ನೇ ದಿನದಾಟವಾದ ಸೋಮವಾರ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿರುವ ಭಾರತೀಯ ವೇಗದ ಬೌಲರ್ ಮುಹಮ್ಮದ್ ಸಿರಾಜ್ಗೆ ಅವರ ಪಂದ್ಯಶುಲ್ಕದಲ್ಲಿ ಶೇ.15ರಷ್ಟು ದಂಡ ವಿಧಿಸಲಾಗಿದೆ.
4ನೇ ದಿನದಾಟದಲ್ಲಿ ಇಂಗ್ಲೆಂಡ್ನ ಆರಂಭಿಕ ಬ್ಯಾಟರ್ ಬೆನ್ ಡಕೆಟ್ ವಿಕೆಟ್ ಪಡೆದ ನಂತರ ಸಿರಾಜ್ ಅವರ ಅಬ್ಬರದ ಸಂಭ್ರಮಾಚರಣೆ ಎಲ್ಲರ ಗಮನ ಸೆಳೆದಿತ್ತು. ಸಿರಾಜ್ ಅವರಿ ಬ್ಯಾಟರ್ ಡಕೆಟ್ ಸನಿಹ ತೆರಳಿ ಸಂಭ್ರಮಾಚರಣೆ ನಡೆಸಿದರು. ಡಕೆಟ್ ಡೆಸ್ಸಿಂಗ್ ರೂಮ್ನತ್ತ ಹೆಜ್ಜೆ ಇಡುತ್ತಿದ್ದಾಗ ಅವರನ್ನು ದಿಟ್ಟಿಸಿ ನೋಡಿದ್ದಲ್ಲದೆ, ಅವರ ಭುಜವನ್ನು ತಳ್ಳಿದರು.
ಡಕೆಟ್ ಎದುರಲ್ಲೇ ಸಿರಾಜ್ ಸಂಭ್ರಮಾಚರಣೆಯ ವೀಡಿಯೊ ವೈರಲ್ ಆಗಿದೆ.
ಸಿರಾಜ್ ಅವರು ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಉಲ್ಲಂಘಿಸಿದ್ದಾರೆ. ನೀತಿ ಸಂಹಿತೆಯ ಪ್ರಕಾರ ಔಟ್ ಆದ ಬ್ಯಾಟರ್ನನ್ನು ಕೆರಳಿಸುವ ಅಥವಾ ಅಸಮಾಧಾನಗೊಳಿಸುವ ಪದ ಬಳಕೆ ಮಾಡುವಂತಿಲ್ಲ ಅಥವಾ ಸನ್ನೆ ಬಳಸುವಂತಿಲ್ಲ.
ಸಿರಾಜ್ ಅವರು ದಂಡದ ಜೊತೆಗೆ 1 ಡಿಮೆರಿಟ್ ಪಾಯಿಂಟ್ ಸ್ವೀಕರಿಸಿದ್ದಾರೆ.ಕಳೆದ 24 ತಿಂಗಳಲ್ಲಿ 2ನೇ ಬಾರಿ ಸಿರಾಜ್ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಸಿರಾಜ್ ಒಟ್ಟು 2 ಡಿಮೆರಿಟ್ ಪಾಯಿಂಟ್ಸ್ ಪಡೆದಿದ್ದಾರೆ.
ಇನ್ನೆರಡು ವರ್ಷಗಳಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಡಿಮೆರಿಟ್ ಪಾಯಿಂಟ್ಸ್ ಪಡೆದರೆ ಒಂದು ಅಂತರ್ರಾಷ್ಟ್ರೀಯ ಟೆಸ್ಟ್ ಪಂದ್ಯದಿಂದ ಅಮಾನತು ಮಾಡಲಾಗುತ್ತದೆ.
मोहम्मद सिराज पर जुर्माना!
— Ankit Rajput (@AnkitKu50823807) July 14, 2025
डकेट का विकेट लेने के बाद जश्न मनाने की वजह से सिराज की मैच फीस का 15% काटा गया है।
क्रिकेट में जोश ठीक है, लेकिन नियमों का पालन भी ज़रूरी है।#MohammedSiraj #INDvsENG #CricketNews #INDVsENGLive pic.twitter.com/OPqGO3abHf







