ಭಾರತ ತಂಡ ಇಂಗ್ಲೆಂಡ್ನಲ್ಲಿ ಈ ತನಕ ಚೇಸ್ ಮಾಡಿದ ಗರಿಷ್ಠ ಮೊತ್ತ ಎಷ್ಟು?

PC : PTI
ಲಾರ್ಡ್ಸ್, ಜು.13: ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ಸರಣಿಯಲ್ಲಿ ಇದೇ ಮೊದಲ ಬಾರಿ 3ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ ಭಾರತ ತಂಡವು 193 ರನ್ ಚೇಸ್ ಮಾಡಲಿದೆ.
ಭಾರತ ತಂಡವು ಇಂಗ್ಲೆಂಡ್ ನೆಲದಲ್ಲಿ ಈ ತನಕ ಕೇವಲ 3 ಬಾರಿ ಯಶಸ್ವಿಯಾಗಿ ರನ್ ಬೆನ್ನಟ್ಟಿದೆ. 2007ರಲ್ಲಿ ಟ್ರೆಂಟ್ಬ್ರಿಡ್ಜ್ನಲ್ಲಿ ಕೊನೆಯ ಬಾರಿ ಈ ಸಾಧನೆ ಮಾಡಿದೆ. ಲಾರ್ಡ್ಸ್ ಕ್ರೀಡಾಂಗಣದಲ್ಲಿ ಕೂಡ ಈ ಸಾಧನೆ ಮಾಡಿದೆ. ಲಾರ್ಡ್ಸ್ನಲ್ಲಿ 1986ರಲ್ಲಿ 5 ವಿಕೆಟ್ ಗಳನ್ನು ಕಳೆದುಕೊಂಡು 134 ರನ್ ಗುರಿ ತಲುಪಿತ್ತು.
ರನ್ ಚೇಸ್ ವೇಳೆ ಭಾರತವು 9 ಬಾರಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿಯೂ ಶಕ್ತವಾಗಿದೆ.
ಭಾರತ ಈ ತನಕ ಇಂಗ್ಲೆಂಡ್ನಲ್ಲಿ 200 ಹಾಗೂ ಅದಕ್ಕಿಂತ ಹೆಚ್ಚು ರನ್ ಚೇಸ್ ಮಾಡಿಲ್ಲ. ಇಂಗ್ಲೆಂಡ್ನಲ್ಲಿ 25 ಬಾರಿ ರನ್ ಚೇಸ್ ಮಾಡಿದ್ದ ಭಾರತವು ಕೇವಲ 3 ಬಾರಿ ಜಯ ಸಾಧಿಸಿತ್ತು.
ಭಾರತ ತಂಡವು 18 ಪಂದ್ಯಗಳಲ್ಲಿ 200 ಅಥವಾ ಅದಕ್ಕಿಂತ ಹೆಚ್ಚು ರನ್ ಗುರಿ ಪಡೆದಿದೆ. ಈ ಪೈಕಿ 12 ಬಾರಿ ಸೋತಿದೆ. 6 ಬಾರಿ ಡ್ರಾ ಸಾಧಿಸಿದೆ.
ಇಂಗ್ಲೆಂಡ್ನಲ್ಲಿ ಯಶಸ್ವಿಯಾಗಿ ಚೇಸ್ ಮಾಡಿದ ರನ್
174/6, ದಿ ಓವಲ್ನಲ್ಲಿ(1971ರಲ್ಲಿ)
*136/5, ಲಾರ್ಡ್ಸ್ನಲ್ಲಿ(1986)
*73/3, ಟ್ರೆಂಟ್ಬ್ರಿಡ್ಜ್ನಲ್ಲಿ(2007)







