100 ಮೀ ಓಟದಲ್ಲಿ ರಾಷ್ಟ್ರೀಯ ದಾಖಲೆ ಮುರಿದ ಅನಿಮೇಶ್ ಕುಜೂರ್

Photo - PTI
ವಾರಿ (ಗ್ರೀಸ್): ಅನಿಮೇಶ್ ಕುಜೂರ್ ಪುರುಷರ 100 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. ಗ್ರೀಸ್ ದೇಶದ ವಾರಿಯಲ್ಲಿ ನಡೆಯುತ್ತಿರುವ ಡ್ರೋಮಿಯ ಅಂತರರಾಷ್ಟ್ರೀಯ ಸ್ಪ್ರಿಂಟ್ ಮತ್ತು ರಿಲೇಸ್ ಕ್ರೀಡಾಕೂಟದ ಎರಡನೇ ಹೀಟ್ ನಲ್ಲಿ ಶನಿವಾರ ಅವರು ಈ ಸಾಧನೆ ಮಾಡಿದ್ದಾರೆ.
ಅವರು 200 ಮೀಟರ್ ಓಟದಲ್ಲೂ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ.
ಅವರು 100 ಮೀಟರ್ ಓಟವನ್ನು 10.18 ಸೆಕೆಂಡ್ ನಲ್ಲಿ ಮುಗಿಸಿ ಹೀಟ್ 2ರ ವಿಜಯಿಯಾಗಿ ಹೊರಹೊಮ್ಮಿದರು. ಈ ಮೂಲಕ 100 ಮೀಟರ್ ಓಟವನ್ನು 10.20 ಸೆಕೆಂಡ್ಗಿಂತ ಮೊದಲು ಮುಗಿಸಿದ ಮೊದಲ ಭಾರತೀಯ ಅತ್ಲೀಟ್ ಕೂಡ ಅವರಾದರು.
ಅವರು 100 ಮೀಟರ್ ಓಟದಲ್ಲಿ ಗುರಿಂದರ್ವಿರ್ ಸಿಂಗ್ ಈ ವರ್ಷದ ಮಾರ್ಚ್ ನಲ್ಲಿ ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಗ್ರ್ಯಾನ್ ಪ್ರಿ 2025 ಕ್ರೀಡಾಕೂಟದಲ್ಲಿ ಸ್ಥಾಪಿಸಿದ್ದ 10.20 ಸೆಕೆಂಡ್ ನ ದಾಖಲೆಯನ್ನು ಮುರಿದರು.
ಈ ಫಲಿತಾಂಶವು ವರ್ಲ್ಡ್ಸ್ ಕ್ವಾಲಿಫೈಯಿಂಗ್ ನಿಟ್ಟಿನಲ್ಲಿ ಮಹತ್ವದ ಅಂಕಗಳನ್ನು ಪಡೆಯುವಲ್ಲಿ ಮಹತ್ವ ಪಾತ್ರವನ್ನು ವಹಿಸುತ್ತದೆ.
Next Story