ಏಷ್ಯನ್ ಗೇಮ್ಸ್: ಸೇಲಿಂಗ್ ನಲ್ಲಿ ಬೆಳ್ಳಿ ಗೆದ್ದ ಭಾರತದ ನೇಹಾ ಠಾಕೂರ್
Photo: PTI
ಹೊಸದಿಲ್ಲಿ/ಬೀಜಿಂಗ್: ಚೀನಾದ ಹ್ಯಾಂಗ್ಝೌನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್ನಲ್ಲಿ ಭಾರತದ ನೇಹಾ ಠಾಕೂರ್ ಮಹಿಳೆಯರ ಡಿಂಗಿ ಐಎಲ್ಸಿಎ-4 ಸೇಲಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ನೇಹಾ ಒಟ್ಟು 32 ಪಾಯಿಂಟ್ಗಳನ್ನು ಗಳಿಸಿದ್ದು, 27 ನೆಟ್ ಸ್ಕೋರ್ ಗಳಿಸಿದ್ದಾರೆ.
ಥಾಯ್ಲೆಂಡ್ನ ನೊಪಾಸ್ಸೋರ್ನ್ ಖುನ್ಬೂಂಜಾನ್ ಅವರು ನೆಟ್ ಸ್ಕೋರ್ 16 ರ ಜೊತೆ ಒಟ್ಟು 20 ಪಾಯಿಂಟ್ಗಳನ್ನು ಗಳಿಸಿದ್ದು, ಚಿನ್ನದ ಪದಕ ಗೆದ್ದಿದ್ದಾರೆ. ನೆಟ್ ಸ್ಕೋರ್ 28 ರೊಂದಿಗೆ ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್ ಕಂಚಿಗೆ ತೃಪ್ತಿಪಟ್ಟಿದ್ದಾರೆ.
Next Story