ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 20,000 ರನ್ | ಸಚಿನ್, ವಿರಾಟ್, ದ್ರಾವಿಡ್ ಪಟ್ಟಿಗೆ ಸೇರ್ಪಡೆಯಾದ ರೋಹಿತ್ ಶರ್ಮಾ

ರೋಹಿತ್ ಶರ್ಮಾ | Photo Credit : PTI
ಹೊಸದಿಲ್ಲಿ, ಡಿ.6: ರೋಹಿತ್ ಶರ್ಮಾ ಅವರು ಪುರುಷರ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 20,000 ರನ್ ಗಳಿಸಿದ ಭಾರತದ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆದ ಮೂರನೇ ಏಕದಿನ ಪಂದ್ಯದ 14ನೇ ಓವರ್ ನಲ್ಲಿ ರೋಹಿತ್ ಈ ಮೈಲಿಗಲ್ಲು ತಲುಪಿದರು.
ಈ ಸಾಧನೆಯ ಮೂಲಕ ರೋಹಿತ್ ಅವರು ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಹಾಗೂ ರಾಹುಲ್ ದ್ರಾವಿಡ್ ಅವರಿದ್ದ ಎಲೈಟ್ ಪಟ್ಟಿಗೆ ಸೇರ್ಪಡೆಯಾದರು.
►20,000ಕ್ಕೂ ಅಧಿಕ ರನ್ ಗಳಿಸಿದ ಭಾರತದ ಬ್ಯಾಟರ್ ಗಳು
34,357 ರನ್-ಸಚಿನ್ ತೆಂಡುಲ್ಕರ್
27,910 ರನ್-ವಿರಾಟ್ ಕೊಹ್ಲಿ
24,208 ರನ್-ರಾಹುಲ್ ದ್ರಾವಿಡ್
20,000-ರೋಹಿತ್ ಶರ್ಮಾ
Next Story





