ಐಪಿಎಲ್ 2024: ಹಸಿರು-ಮರೂನ್ ಬಣ್ಣದ ಜೆರ್ಸಿಯಲ್ಲಿ ಮಿಂಚಿದ ಲಕ್ನೋ; ಕಾರಣವೇನು ನೋಡಿ

PC :X \@IPL
ಹೊಸದಿಲ್ಲಿ: ಐಪಿಎಲ್ 2024 ರ 28ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ (LSG) ಹಸಿರು ಮತ್ತು ಮರೂನ್ ಬಣ್ಣದ ಜೆರ್ಸಿಯೊಂದಿಗೆ ಕ್ರೀಡಾಂಗಣಕ್ಕಿಳಿದಿದೆ.
ರವಿವಾರ ಕೋಲ್ಕತ್ತಾದಲ್ಲಿ ಕೆಕೆಆರ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಲಕ್ನೋ ತಂಡವು ಹಸಿರು ಮತ್ತು ಮರೂನ್ ಬಣ್ಣದ ಜೆರ್ಸಿ ಧರಿಸಿ ನಗರಕ್ಕೆ ಗೌರವ ಸಲ್ಲಿಸುತ್ತಿದೆ.
ಕೊಲ್ಕತ್ತಾದ ಪ್ರಸಿದ್ಧ ಫುಟ್ಬಾಲ್ ಕ್ಲಬ್ ಮೋಹನ್ ಬಗಾನ್ ಸೂಪರ್ ಜೈಂಟ್ (MBSG) ಗೆ ಗೌರವ ಅರ್ಪಿಸುವ ಸಲುವಾಗಿ ಲಕ್ನೋ ತಂಡವು ಈ ನಿರ್ಧಾರ ಕೈಗೊಂಡಿದೆ.
LSG ಮಾಲಕರಾಗಿರುವ ಸಂಜೀವ್ ಗೋಯೆಂಕಾ ಅವರ RPSG ಗ್ರೂಪ್ ಇಂಡಿಯನ್ ಸೂಪರ್ ಲೀಗ್ನಲ್ಲಿ MBSG ತಂಡದ ಒಡೆತನ ಹೊಂದಿದೆ.
Next Story





