IPL-2026| ವೈಭವ್ ಸೂರ್ಯವಂಶಿಗೆ ಬೀಳ್ಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜಮೀಸನ್ಗೆ ಛೀಮಾರಿ

Photo Credit : X
ಹೊಸದಿಲ್ಲಿ, ಮೇ 2: ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಶುಕ್ರವಾರ ಜೈಪುರದಲ್ಲಿ ನಡೆದಿದ್ದ ಐಪಿಎಲ್ ಪಂದ್ಯದ ವೇಳೆ ಬೀಳ್ಕೊಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಕೈಲ್ ಜಮೀಸನ್ಗೆ ಛೀಮಾರಿ ಹಾಕಲಾಗಿದೆ.
ಕಿವೀಸ್ನ ವೇಗದ ಬೌಲರ್ ಜಮೀಸನ್ ತನ್ನ ಮೊದಲ ಎಸೆತದಲ್ಲಿ ಬೌಂಡರಿ ಬಿಟ್ಟುಕೊಟ್ಟರು. ಇನಿಂಗ್ಸ್ನ ಎರಡನೇ ಎಸೆತದಲ್ಲಿ 15ರ ವಯಸ್ಸಿನ ಆರಂಭಿಕ ಆಟಗಾರ ಸೂರ್ಯವಂಶಿ ವಿಕೆಟನ್ನು ಉರುಳಿಸುವಲ್ಲಿ ಸಫಲರಾದರು.
ಜಮೀಸನ್ಗೆ ಡಿಮೆರಿಟ್ ಪಾಯಿಂಟ್ ನೀಡಲಾಗಿದ್ದು, ಐಪಿಎಲ್ ನೀತಿ ಸಂಹಿತೆ ಲೆವೆಲ್ 1 ಅನ್ನು ಉಲಂಘಿಸಿರುವುದಕ್ಕೆ ಎಚ್ಚರಿಕೆ ನೀಡಲಾಗಿದೆ.
ಪಂದ್ಯದಲ್ಲಿ ಇನ್ನೊಬ್ಬ ಆಟಗಾರನಿಂದ ಆಕ್ರಮಣಕಾರಿ ಪ್ರತಿಕ್ರಿಯೆಗೆ ಪ್ರಚೋದಿಸುವ ಅಥವಾ ಅವಹೇಳನಕಾರಿಯಾಗಿ ವರ್ತಿಸುವ ಭಾಷೆ, ಕ್ರಿಯೆ ಅಥವಾ ಸನ್ನೆಗಳನ್ನು ಬಳಸುವುದಕ್ಕೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಜೆಮೀಸನ್ ಉಲ್ಲಂಘಿಸಿದ್ದಾರೆ ಎಂದು ಕಂಡುಬಂದಿದೆ.
ಜಮೀಸನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ರಾಜೀವ್ ಸೇಥ್ ನೀಡಿದ್ದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ ಎಂದು ಹೇಳಿಕೆಯೊಂದು ತಿಳಿಸಿದೆ.




