IPL-2026| ಮುಂಬೈ ಇಂಡಿಯನ್ಸ್ ವಿರುದ್ಧವೂ ಆಡದ ಎಂ.ಎಸ್. ಧೋನಿ

ಎಂ.ಎಸ್. ಧೋನಿ | Photo Credit : PTI
ಚೆನ್ನೈ, ಮೇ 2: ಹಿರಿಯ ಬ್ಯಾಟರ್ ಎಂ.ಎಸ್.ಧೋನಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಶನಿವಾರ 11ರ ಬಳಗ ಅಥವಾ ಇಂಪ್ಯಾಕ್ಟ್ ಸಬ್ನಲ್ಲಿ ಸ್ಥಾನ ಪಡೆದಿಲ್ಲ. ಹೀಗಾಗಿ 44ರ ಹರೆಯದ ಧೋನಿ ಆಡುವುದನ್ನು ನೋಡಲು ಇನ್ನಷ್ಟು ಸಮಯ ಕಾಯಬೇಕಾಗಿದೆ.
ಧೋನಿ ಈ ಋತುವಿನಲ್ಲಿ ಒಂದೂ ಪಂದ್ಯವನ್ನು ಆಡಿಲ್ಲ. ಈ ವರ್ಷಾರಂಭದಲ್ಲಿ ಕಾಣಿಸಿಕೊಂಡಿರುವ ಕಾಲುನೋವಿನಿಂದ ಧೋನಿ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ.
ಧೋನಿ ಯಾವಾಗ ಮರಳುತ್ತಾರೆಂಬ ಬಗ್ಗೆ ಸಿಎಸ್ಕೆ ಮ್ಯಾನೇಜ್ಮೆಂಟ್ ಯಾವುದೇ ಹೇಳಿಕೆ ನೀಡಿಲ್ಲ. ಧೋನಿ ಆದಷ್ಟು ಬೇಗನೆ ಮರಳಲಿದ್ದಾರೆ ಎಂದು ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತನ್ನ ಚೇತರಿಕೆಯ ಹಾದಿಯಲ್ಲಿ ಧೋನಿ ಅವರು ಹಿನ್ನಡೆ ಅನುಭವಿಸಿದ್ದಾರೆ. ಇದು ಅವರು ಮರಳುವುದಕ್ಕೆ ಎರಡು ವಾರ ವಿಳಂಬ ಮಾಡಲಿದೆ ಎಂದು ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಗುಜರಾತ್ ತಂಡದ ವಿರುದ್ಧ ಸೋತ ನಂತರ ಬಹಿರಂಗಪಡಿಸಿದ್ದರು.
Next Story




