IPL 2026: ಚಾಹಲ್ ದಾಖಲೆ ಮುರಿದ ಜೋಫ್ರಾ ಆರ್ಚರ್

PC: x.com/IPL
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ರಾಜಸ್ಥಾನ ರಾಯಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬೌಲರ್ ಜೋಫ್ರಾ ಆರ್ಚರ್, ಫ್ರಾಂಚೈಸಿ ಪರ ಅತಿಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ನಿರ್ಮಿಸಿದ್ದಾರೆ.
ಕಡಿಮೆ ಸ್ಕೋರ್ನ ಪಂದ್ಯದಲ್ಲಿ ಕೇವಲ 20 ರನ್ ನೀಡಿ ಮೂರು ವಿಕೆಟ್ ಕಿತ್ತ ಜೋಫ್ರಾ ಆರ್ಚರ್, ರಾಜಸ್ಥಾನ ತಂಡದ 40 ರನ್ಗಳ ವಿಜಯದ ರೂವಾರಿ ಎನಿಸಿದರು. ರಾಜಸ್ಥಾನ ಪರ ಇದುವರೆಗೆ 68 ವಿಕೆಟ್ ಕಿತ್ತಿರುವ ಅವರು, ಯಜುವೇಂದ್ರ ಚಾಹಲ್ ಹೆಸರಿನಲ್ಲಿದ್ದ 66 ವಿಕೆಟ್ಗಳ ದಾಖಲೆಯನ್ನು ಮುರಿದರು. ಸಿದ್ಧಾರ್ಥ ತ್ರಿವೇದಿ (65), ಶೇನ್ ವಾಟ್ಸನ್ (61) ಮತ್ತು ಶೇನ್ ವಾರ್ನ್ (57) ಅತಿಹೆಚ್ಚು ವಿಕೆಟ್ ಪಡೆದ ಇತರ ಬೌಲರ್ಗಳು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ಕೇವಲ 159 ರನ್ಗಳನ್ನು ಕಲೆಹಾಕಿದರೂ, ಬೌಲರ್ಗಳು ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. 18 ಓವರ್ಗಳಲ್ಲಿ ಕೇವಲ 119 ರನ್ಗಳಿಗೆ ಲಕ್ನೋ ಆಲ್ಔಟ್ ಆಯಿತು. ಈ ಮೂಲಕ ಪ್ರಸಕ್ತ ಐಪಿಎಲ್ನಲ್ಲಿ ಅತಿಕಡಿಮೆ ರನ್ ಗಳಿಸಿ ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ರಾಜಸ್ಥಾನ ಪಾತ್ರವಾಯಿತು.




