IPL 2026 | ಗುಜರಾತ್ ವಿರುದ್ಧ ಕೆಕೆರ್ಗೆ ಭರ್ಜರಿ ಜಯ : ಪ್ಲೇಆಫ್ ಆಸೆ ಜೀವಂತ

Photo credit: X/@IPL
ಹೊಸದಿಲ್ಲಿ: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 29 ರನ್ಗಳ ಜಯ ಗಳಿಸುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಲೇಆಫ್ ಆಸೆ ಇನ್ನೂ ಜೀವಂತವಾಗಿದೆ. ನಾಯಕ ಶುಭಮನ್ ಗಿಲ್ ಅವರ ದಿಟ್ಟ ಹೋರಾಟದ ನಡುವೆಯೂ ಜಿಟಿ ತಂಡದ ಐದು ಗೆಲುವುಗಳ ಸರಣಿಯನ್ನು ತುಂಡರಿಸುವಲ್ಲಿ ಕೆಕೆಆರ್ ಯಶಸ್ವಿಯಾಗಿದೆ.
ಕೆಕೆಆರ್ ನೀಡಿದ್ದ 248 ರನ್ಗಳ ದೊಡ್ಡ ಸವಾಲನ್ನು ಬೆನ್ನಟ್ಟಿದ ಜಿಟಿ, ಎದುರಾಳಿ ತಂಡದ ಬೌಲರ್ ಗಳು ಅಂತಿಮ ಓವರ್ ಗಳಲ್ಲಿ ಬಿಗಿ ಹಿಡಿತ ಸಾಧಿಸಿದ್ದರಿಂದ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಗಿಲ್ 45 ಎಸೆತಗಳಲ್ಲಿ 89 ರನ್ ಸಿಡಿಸಿದರೆ, ಜೋಸ್ ಬಟ್ಲರ್ 35 ಎಸೆತಗಳಲ್ಲಿ 57 ರನ್ ಗಳಿಸಿದರು. 28 ಎಸೆತಗಳಲ್ಲಿ 53 ರನ್ ಗಳಿಸಿದ ಸಾಯಿ ಸುದರ್ಶನ್ ಗಾಯಾಳುವಾಗಿ ನಿವೃತ್ತರಾದರು.
ಈ ಗೆಲುವಿನೊಂದಿಗೆ ಕೆಕೆಆರ್ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದ್ದು, ನಾಲ್ಕನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಗಿಂತ ಎರಡು ಅಂಕ ಕಡಿಮೆ ಹೊಂದಿದೆ.
ಆರ್ಸಿಬಿ 12 ಪಂದ್ಯಗಳಿಂದ 16 ಅಂಕ ಪಡೆದು ಅಗ್ರಸ್ಥಾನದಲ್ಲಿದ್ದರೆ, ಜಿಟಿ 13 ಪಂದ್ಯಗಳಿಂದ 16 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ. ಎಸ್ಆರ್ಎಚ್ (14) ಹಾಗೂ ಪಿಬಿಕೆಎಸ್ (13) ನಂತರದ ಸ್ಥಾನಗಳಲ್ಲಿವೆ. ತಲಾ 12 ಅಂಕಗಳನ್ನು ಕಲೆಹಾಕಿರುವ ಆರ್ಆರ್ ಹಾಗೂ ಸಿಎಸ್ಕೆ ಕ್ರಮವಾಗಿ ಐದು ಮತ್ತು ಆರನೇ ಸ್ಥಾನಗಳಲ್ಲಿವೆ.




