IPL 2026 | ಕೊಹ್ಲಿಯ ʼವಿರಾಟʼ ಶತಕ; KKR ವಿರುದ್ಧ RCB ಗೆ ಜಯ

photo credit : @RCBTweets
ರಾಯ್ಪುರ: ಇಲ್ಲಿನ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.
ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ RCB ತಂಡವು KKR ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿದ KKR ತಂಡವು ಉತ್ತಮ ಮೊತ್ತ ಕಲೆಹಾಕಿತು.
193 ರನ್ ಗಳ ಗುರಿ ಪಡೆದ RCB ತಂಡವು ವಿರಾಟ್ ಕೊಹ್ಲಿಯವರ 105 ರನ್ ಗಳ ನೆರವಿನಿಂದ 5 ಎಸೆತ ಬಾಕಿಯಿರುವಾಗಲೇ 194 ರನ್ ಗಳಿಸಿ ಕೋಲ್ಕತ್ತಾ ತಂಡವನ್ನು ಸೋಲಿಸಿ ಗೆಲುವಿನ ದಡ ಸೇರಿತು.
Next Story




