IPL 2026 | ಇದೇ ಮೊದಲ ಬಾರಿ ಪಂದ್ಯದ ದಿನ ಮೈದಾನಕ್ಕಿಳಿದ ಧೋನಿ!

ಎಂ.ಎಸ್. ಧೋನಿ | Photo Credit : NDTV
ಚೆನ್ನೈ, ಮೇ 18: ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ವಿಕೆಟ್ಕೀಪರ್-ಬ್ಯಾಟರ್ ಎಂ.ಎಸ್. ಧೋನಿ ಪಂದ್ಯದ ದಿನ ಮೈದಾನದಲ್ಲಿ ಕಾಣಿಸಿಕೊಂಡರು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಆಡುವ 11ರ ಬಳಗ ಅಥವಾ ಬದಲಿ ಆಟಗಾರರ ಗುಂಪಿನಲ್ಲಿ ಸ್ಥಾನ ಪಡೆಯಲಿಲ್ಲ.
ಈ ಬಾರಿಯ ಐಪಿಎಲ್ನಲ್ಲಿ ಮೊದಲ ಬಾರಿ ಚೆನ್ನೈನಲ್ಲಿ ಟಾಸ್ ಗೆದ್ದಿರುವ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ‘‘ಧೋನಿ ಅವರು ಪಂದ್ಯ ಆಡುವಷ್ಟು ಫಿಟ್ ಆಗಿಲ್ಲ. ಪಿಚ್ ಸ್ವಲ್ಪ ಒಣಗಿದಂತೆ ಕಂಡಬಂದಿದ್ದು, ರನ್ ಗಳಿಸಲು ಸುಲಭವಾಗಬಹುದು. ಇಬ್ಬನಿಯ ಕೊರತೆ ಕೂಡ ಈ ನಿರ್ಧಾರಕ್ಕೆ ಕಾರಣವಾಗಿದೆ’’ ಎಂದು ಗಾಯಕ್ವಾಡ್ ಹೇಳಿದ್ದಾರೆ.
ಸಿಎಸ್ಕೆ ತಂಡವು ಒಂದು ಬದಲಾವಣೆಯನ್ನು ಮಾಡಿದ್ದು, ಗುರ್ಜಪ್ನೀತ್ ಸಿಂಗ್ ಬದಲಿಗೆ ಸ್ಪಿನ್ನರ್ ಅಕೀಲ್ ಹುಸೇನ್ ಗೆ ಅವಕಾಶ ನೀಡಲಾಗಿದೆ.
Next Story




