IPL | ಮಾರಾಟವಾಗದೆ ಉಳಿದ ಪ್ರಮುಖ ಆಟಗಾರರು

Photo Credit: PTI
ಅಬುಧಾಬಿ, ಡಿ.16: ಇತ್ತೀಚೆಗೆ ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಆಲ್ರೌಂಡರ್ ತನುಷ್ ಕೋಟ್ಯಾನ್ ಮಾರಾಟವಾಗದೆ ಉಳಿದರು. ಭಾರತೀಯ ಬ್ಯಾಟರ್ ಪೃಥ್ವಿ ಶಾ ಹಾಗೂ ಸರ್ಫರಾಝ್ ಖಾನ್ ಕೊನೆಯ ಕ್ಷಣದಲ್ಲಿ ಮೂಲ ಬೆಲೆ 75 ಲಕ್ಷ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ಗೆ ಬಿಕರಿಯಾದರು.
ಕೆಸಿ ಕಾರಿಯಪ್ಪ(30 ಲಕ್ಷ ರೂ. ಮೂಲ ಬೆಲೆ),ಎಂ. ಅಶ್ವಿನ್(30 ಲಕ್ಷರೂ.), ಕೆ.ಎಂ.ಆಸಿಫ್(40 ಲ.ರೂ.), ಚೇತನ್ ಸಕಾರಿಯ(75 ಲ.ರೂ.), ದಸುನ್ ಶನಕ(75 ಲ.ರೂ.), ಡ್ಯಾರಿಲ್ ಮಿಚೆಲ್(2 ಕೋ.ರೂ.), ಬ್ರೆಸ್ವೆಲ್(2 ಕೋ.ರೂ.), ಶಾನ್ ಅಬೊಟ್(2 ಕೋ.ರೂ.), ಕರ್ಣ್ ಶರ್ಮಾ(50 ಲ.ರೂ.), ತುಷಾರ್ ರಹೇಜ(30 ಲ.ರೂ.), ತನುಷ್ ಕೋಟ್ಯಾನ್(30 ಲ.ರೂ.), ಯಶ್ ಧುಲ್(30 ಲ.ರೂ.), ಜಮೀ ಸ್ಮಿತ್(2 ಕೋ.ರೂ.), ಅಟಿನ್ಸನ್(2 ಕೋ.ರೂ.), ಮಹೀಶ್ ತೀಕ್ಷಣ(2 ಕೋ.ರೂ.), ವಿಜಯ ಶಂಕರ್(30 ಲ.ರೂ.), ದೀಪಕ್ ಹೂಡಾ(75 ಲಕ್ಷ ರೂ.),ಬೈರ್ಸ್ಟೋವ್(1 ಕೋ.ರೂ.)ಹಾಗೂ ಅಲ್ಜಾರಿ ಜೋಸೆಫ್(2 ಕೋ.ರೂ.)ಮಾರಾಟವಾಗದೆ ಉಳಿದ ಪ್ರಮುಖ ಆಟಗಾರರಾಗಿದ್ದಾರೆ.





