IPL: ಲೀಗ್ ಹಂತದ ಸಂಪೂರ್ಣ ವೇಳಾಪಟ್ಟಿ ಪ್ರಕಟ

ಹೊಸದಿಲ್ಲಿ, ಮಾ.26: ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಪಂದ್ಯಾವಳಿಯ ಎರಡನೇ ಹಂತದ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ. ಎರಡನೇ ಹಂತದ ಲೀಗ್ ಪಂದ್ಯಗಳು ಎಪ್ರಿಲ್ 13ರಿಂದ ಮೇ 24ರ ತನಕ ನಡೆಯಲಿದೆ ಎಂದು ಬಿಸಿಸಿಐ ಖಚಿತಪಡಿಸಿದೆ.
ಅಸ್ಸಾಂ, ಪಶ್ಚಿಮಬಂಗಾಳ ಹಾಗೂ ತಮಿಳುನಾಡಿನ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಬಾಕಿ ಇದ್ದ ಕಾರಣ ಬಿಸಿಸಿಐ ಈ ಹಿಂದೆ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಚುನಾವಣೆಯಿಂದ ಪಂದ್ಯಾವಳಿಗೆ ಕಡಿಮೆ ಅಡಚಣೆಯನ್ನು ಖಚಿತಪಡಿಸಿಕೊಂಡ ನಂತರ ಗುರುವಾರ ಪ್ಲೇ ಆಫ್ ಪಂದ್ಯಗಳನ್ನು ಹೊರತುಪಡಿಸಿ ಉಳಿದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪಶ್ಚಿಮ ಏಶ್ಯದಲ್ಲಿ ಈಗ ನಡೆಯುತ್ತಿರುವ ಯುದ್ದದಿಂದಾಗಿ ಇಂಧನ ಬಿಕ್ಕಟ್ಟಿನಿಂದಾಗಿ ಸಾರಿಗೆ ವ್ಯವಸ್ಥೆ ಅಥವಾ ಪ್ರೇಕ್ಷಕರ ಹಾಜರಾತಿಯ ಮೇಲೆ ಸಂಭಾವ್ಯಪರಿಣಾಮದ ಸುತ್ತ ಕಳವಳ ಆವರಿಸಿದ ಹೊರತಾಗಿಯೂ ಪಂದ್ಯಗಳನ್ನು ಕಡಿತಗೊಳಿಸದೆ ಪಂದ್ಯಾವಳಿಯನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.
ಮಾರ್ಚ್ 28ರಿಂದ ಎಪ್ರಿಲ್ 11 ರ ತನಕ ಮೊದಲ ಹಂತದಲ್ಲಿ 20 ಲೀಗ್ ಪಂದ್ಯಗಳು ನಡೆಯಲಿವೆ. ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಮಾ.28ರಂದು ಉದ್ಘಾಟನಾ ಪಂದ್ಯವನ್ನು ಆಡಲಿದೆ.
ಇಂದಿನ ವೇಳಾಪಟ್ಟಿಯ ಪ್ರಕಾರ ಎಪ್ರಿಲ್ 13ರಿಂದ ಮೇ 24ರ ತನಕ ದೇಶದ 12 ತಾಣಗಳಲ್ಲಿ ಒಟ್ಟು 50 ಪಂದ್ಯಗಳು ನಡೆಯಲಿವೆ. ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತಾ, ಹೊಸದಿಲ್ಲಿ, ಅಹ್ಮದಾಬಾದ್, ಹೈದರಾಬಾದ್, ಲಕ್ನೊ, ಜೈಪುರ, ಧರ್ಮಶಾಲಾ, ರಾಯ್ಪುರ ಹಾಗೂ ನ್ಯೂ ಚಂಡಿಗಡದಲ್ಲಿ ಲೀಗ್ ಪಂದ್ಯಗಳು ನಡೆಯಲಿವೆ. ಎ.13ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸುವ ಮೂಲಕ ಎರಡನೇ ಹಂತದ ಲೀಗ್ ಪಂದ್ಯಗಳು ಆರಂಭವಾಗಲಿವೆ.
ಆರ್‌ಸಿಬಿ, ರಾಯ್ಪುರವನ್ನು ತನ್ನ ಎರಡನೇ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ. ಧರ್ಮಶಾಲಾದಲ್ಲಿ ಈ ಬಾರಿ ಐಪಿಎಲ್ ಪಂದ್ಯ ನಡೆಯಲಿದೆ. ಕಳೆದ ವರ್ಷ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆತೋರಿದ ಕಾರಣ ಡೆಲ್ಲಿ ಹಾಗೂ ಪಂಜಾಬ್ ನಡುವಿನ ಪಂದ್ಯ ರದ್ದಾಗಿತ್ತು. ಈ ವರ್ಷ ಮೇ 11ರಂದು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯು ಡೆಲ್ಲಿ-ಪಂಜಾಬ್ ನಡುವಿನ ಐಪಿಎಲ್ ಪಂದ್ಯವನ್ನೇ ಆಯೋಜಿಸಲಿದೆ.
ಐಪಿಎಲ್ 2026 ಸಂಪೂರ್ಣ ವೇಳಾಪಟ್ಟಿ
ದಿನಾಂಕ ತಂಡಗಳು ಸಮಯ ಸ್ಥಳ
ಮಾ.28 ಹೈದರಾಬಾದ್-ಆರ್‌ಸಿಬಿ ರಾತ್ರಿ 7:30 ಬೆಂಗಳೂರು
ಮಾ.29 ಕೆಕೆಆರ್-ಮುಂಬೈ ರಾತ್ರಿ 7:30 ಮುಂಬೈ
ಮಾ.30 ಚೆನ್ನೈ-ರಾಜಸ್ಥಾನ ರಾತ್ರಿ 7:30 ಗುವಾಹಟಿ
ಮಾ.31 ಗುಜರಾತ್-ಪಂಜಾಬ್ ರಾತ್ರಿ 7:30 ನ್ಯೂ ಚಂಡಿಗಡ
ಎ.1 ಡೆಲ್ಲಿ-ಲಕ್ನೊ ರಾತ್ರಿ 7:30 ಲಕ್ನೊ
ಎ.2 ಹೈದರಾಬಾದ್-ಕೆಕೆಆರ್ ರಾತ್ರಿ 7:30 ಕೋಲ್ಕತಾ
ಎ.3 ಪಂಜಾಬ್-ಚೆನ್ನೈ ರಾತ್ರಿ 7:30 ಚೆನ್ನೈ
ಎ.4 ಮುಂಬೈ-ಡೆಲ್ಲಿ ಮಧ್ಯಾಹ್ನ 3:30 ಹೊಸದಿಲ್ಲಿ
ಎ.4 ರಾಜಸ್ಥಾನ-ಗುಜರಾತ್ ರಾತ್ರಿ 7:30 ಅಹ್ಮದಾಬಾದ್
ಎ.5 ಲಕ್ನೊ-ಹೈದರಾಬಾದ್ ಮಧ್ಯಾಹ್ನ 3:30 ಹೈದರಾಬಾದ್
ಎ.5 ಚೆನ್ನೈ-ಆರ್‌ಸಿಬಿ ರಾತ್ರಿ 7:30 ಬೆಂಗಳೂರು
ಎ.6 ಪಂಜಾಬ್-ಕೆಕೆಆರ್ ರಾತ್ರಿ 7:30 ಕೋಲ್ಕತಾ
ಎ.7 ಮುಂಬೈ-ರಾಜಸ್ಥಾನ ರಾತ್ರಿ 7:30 ಗುವಾಹಟಿ
ಎ.8 ಗುಜರಾತ್-ಡೆಲ್ಲಿ ರಾತ್ರಿ 7:30 ಹೊಸದಿಲ್ಲಿ
ಎ.9 ಲಕ್ನೊ-ಕೆಕೆಆರ್ ರಾತ್ರಿ 7:30 ಕೋಲ್ಕತಾ
ಎ.10 ಆರ್‌ಸಿಬಿ-ರಾಜಸ್ಥಾನ ರಾತ್ರಿ 7:30 ಗುವಾಹಟಿ
ಎ.11 ಹೈದರಾಬಾದ್-ಪಂಜಾಬ್ ಮಧ್ಯಾಹ್ನ 3:30 ನ್ಯೂ ಚಂಡಿಗಡ
ಎ.11 ಡೆಲ್ಲಿ-ಚೆನ್ನೈ ರಾತ್ರಿ 7:30 ಚೆನ್ನೈ
ಎ.12 ಗುಜರಾತ್-ಲಕ್ನೊ ಮಧ್ಯಾಹ್ನ 3:30 ಲಕ್ನೊ
ಎ.12 ಆರ್‌ಸಿಬಿ-ಮುಂಬೈ ರಾತ್ರಿ 7:30 ಮುಂಬೈ
ಎ.13 ರಾಜಸ್ಥಾನ-ಹೈದರಾಬಾದ್ ರಾತ್ರಿ 7:30 ಹೈದರಾಬಾದ್
ಎ.14 ಕೆಕೆಆರ್-ಚೆನ್ನೈ ರಾತ್ರಿ 7:30 ಚೆನ್ನೈ
ಎ.15 ಲಕ್ನೊ-ಆರ್‌ಸಿಬಿ ರಾತ್ರಿ 7:30 ಬೆಂಗಳೂರು
ಎ.16 ಪಂಜಾಬ್-ಮುಂಬೈ ರಾತ್ರಿ 7:30 ಮುಂಬೈ
ಎ.17 ಕೆಕೆಆರ್-ಗುಜರಾತ್ ರಾತ್ರಿ 7:30 ಅಹ್ಮದಾಬಾದ್
ಎ.18 ಡೆಲ್ಲಿ-ಆರ್‌ಸಿಬಿ ಮಧ್ಯಾಹ್ನ 3:30 ಬೆಂಗಳೂರು
ಎ.18 ಚೆನ್ನೈ-ಹೈದರಾಬಾದ್ ರಾತ್ರಿ 7:30 ಹೈದರಾಬಾದ್
ಎ.19 ರಾಜಸ್ಥಾನ-ಕೆಕೆಆರ್ ಮಧ್ಯಾಹ್ನ 3:30 ಕೋಲ್ಕತಾ
ಎ.19 ಲಕ್ನೊ-ಪಂಜಾಬ್ ರಾತ್ರಿ 7:30 ನ್ಯೂ ಚಂಡಿಗಡ
ಎ.20 ಮುಂಬೈ-ಗುಜರಾತ್ ರಾತ್ರಿ 7:30 ಅಹ್ಮದಾಬಾದ್
ಎ.21 ಡೆಲ್ಲಿ-ಹೈದರಾಬಾದ್ ರಾತ್ರಿ 7:30 ಹೈದರಾಬಾದ್
ಎ.22 ರಾಜಸ್ಥಾನ-ಲಕ್ನೊ ರಾತ್ರಿ 7:30 ಲಕ್ನೊ
ಎ.23 ಚೆನ್ನೈ-ಮುಂಬೈ ರಾತ್ರಿ 7:30 ಮುಂಬೈ
ಎ.24 ಗುಜರಾತ್-ಆರ್‌ಸಿಬಿ ರಾತ್ರಿ 7:30 ಬೆಂಗಳೂರು
ಎ.25 ಪಂಜಾಬ್-ಡೆಲ್ಲಿ ಮಧ್ಯಾಹ್ನ 3:30 ಹೊಸದಿಲ್ಲಿ
ಎ.25 ಹೈದರಾಬಾದ್-ರಾಜಸ್ಥಾನ ರಾತ್ರಿ 7:30 ಜೈಪುರ
ಎ.26 ಚೆನ್ನೈ-ಗುಜರಾತ್ ಮಧ್ಯಾಹ್ನ 3:30 ಅಹ್ಮದಾಬಾದ್
ಎ.26 ಕೆಕೆಆರ್-ಲಕ್ನೊ ರಾತ್ರಿ 7:30 ಲಕ್ನೊ
ಎ.27 ಆರ್‌ಸಿಬಿ-ಡೆಲ್ಲಿ ರಾತ್ರಿ 7:30 ಹೊಸದಿಲ್ಲಿ
ಎ.28 ರಾಜಸ್ಥಾನ-ಪಂಜಾಬ್ ರಾತ್ರಿ 7:30 ನ್ಯೂ ಚಂಡಿಗಡ
ಎ.29 ಹೈದರಾಬಾದ್-ಮುಂಬೈ ರಾತ್ರಿ 7:30 ಮುಂಬೈ
ಎ.30 ಆರ್‌ಸಿಬಿ-ಗುಜರಾತ್ ರಾತ್ರಿ 7:30 ಅಹ್ಮದಾಬಾದ್
ಮೇ 1 ಡೆಲ್ಲಿ-ರಾಜಸ್ಥಾನ ರಾತ್ರಿ 7:30 ಜೈಪುರ
ಮೇ2 ಮುಂಬೈ-ಚೆನ್ನೈ ರಾತ್ರಿ 7:30 ಚೆನ್ನೈ
ಮೇ 3 ಕೆಕೆಆರ್-ಹೈದರಾಬಾದ್ ಮಧ್ಯಾಹ್ನ 3:30 ಹೈದರಾಬಾದ್
ಮೇ 3 ಪಂಜಾಬ್-ಗುಜರಾತ್ ರಾತ್ರಿ 7:30 ಅಹ್ಮದಾಬಾದ್
ಮೇ 4 ಲಕ್ನೊ-ಮುಂಬೈ ರಾತ್ರಿ 7:30 ಮುಂಬೈ
ಮೇ 5 ಚೆನ್ನೈ-ಡೆಲ್ಲಿ ರಾತ್ರಿ 7:30 ಹೊಸದಿಲ್ಲಿ
ಮೇ 6 ಪಂಜಾಬ್-ಹೈದರಾಬಾದ್ ರಾತ್ರಿ 7:30 ಹೈದರಾಬಾದ್
ಮೇ 7 ಆರ್‌ಸಿಬಿ-ಲಕ್ನೊ ರಾತ್ರಿ 7:30 ಲಕ್ನೊ
ಮೇ 8 ಕೆಕೆಆರ್-ಡೆಲ್ಲಿ ರಾತ್ರಿ 7:30 ಹೊಸದಿಲ್ಲಿ
ಮೇ 9 ಗುಜರಾತ್-ರಾಜಸ್ಥಾನ ರಾತ್ರಿ 7:30 ಜೈಪುರ
ಮೇ 10 ಲಕ್ನೊ-ಚೆನ್ನೈ ಮಧ್ಯಾಹ್ನ 3:30 ಚೆನ್ನೈ
ಮೇ 10 ಮುಂಬೈ-ಆರ್‌ಸಿಬಿ ರಾತ್ರಿ 7:30 ರಾಯ್ಪುರ
ಮೇ 11 ಡೆಲ್ಲಿ-ಪಂಜಾಬ್ ರಾತ್ರಿ 7:30 ಧರ್ಮಶಾಲಾ
ಮೇ 12 ಹೈದರಾಬಾದ್-ಗುಜರಾತ್ ರಾತ್ರಿ 7:30 ಅಹ್ಮದಾಬಾದ್
ಮೇ 13 ಕೆಕೆಆರ್-ಆರ್‌ಸಿಬಿ ರಾತ್ರಿ 7:30 ರಾಯ್ಪುರ
ಮೇ 14 ಮುಂಬೈ-ಪಂಜಾಬ್ ರಾತ್ರಿ 7:30 ಧರ್ಮಶಾಲಾ
ಮೇ 15 ಚೆನ್ನೈ-ಲಕ್ನೊ ರಾತ್ರಿ 7:30 ಲಕ್ನೊ
ಮೇ 16 ಗುಜರಾತ್-ಕೆಕೆಆರ್ ರಾತ್ರಿ 7:30 ಕೋಲ್ಕತಾ
ಮೇ 17 ಆರ್‌ಸಿಬಿ-ಪಂಜಾಬ್ ಮಧ್ಯಾಹ್ನ 3:30 ಧರ್ಮಶಾಲಾ
ಮೇ 17 ರಾಜಸ್ಥಾನ-ಡೆಲ್ಲಿ ರಾತ್ರಿ 7:30 ಹೊಸದಿಲ್ಲಿ
ಮೇ 18 ಹೈದರಾಬಾದ್-ಚೆನ್ನೈ ರಾತ್ರಿ 7:30 ಚೆನ್ನೈ
ಮೇ19 ಲಕ್ನೊ-ರಾಜಸ್ಥಾನ ರಾತ್ರಿ 7:30 ಜೈಪುರ
ಮೇ20 ಮುಂಬೈ-ಕೆಕೆಆರ್ ರಾತ್ರಿ 7:30 ಕೋಲ್ಕತಾ
ಮೇ 21 ಗುಜರಾತ್-ಚೆನ್ನೈ ರಾತ್ರಿ 7:30 ಚೆನ್ನೈ
ಮೇ 22 ಆರ್‌ಸಿಬಿ-ಹೈದರಾಬಾದ್ ರಾತ್ರಿ 7:30 ಹೈದರಾಬಾದ್
ಮೇ 23 ಪಂಜಾಬ್-ಲಕ್ನೊ ರಾತ್ರಿ 7:30 ಲಕ್ನೊ
ಮೇ 24 ರಾಜಸ್ಥಾನ-ಮುಂಬೈ ಮಧ್ಯಾಹ್ನ 3:30 ಮುಂಬೈ
ಮೇ 24 ಡೆಲ್ಲಿ-ಕೆಕೆಆರ್ ರಾತ್ರಿ 7:30 ಕೋಲ್ಕತಾ







