ಜೂ. 7ರಂದು ಮೆಕ್ಸಿಕೊಗೆ ತೆರಳಲಿದೆ ಇರಾನ್ ಫುಟ್ಬಾಲ್ ವಿಶ್ವಕಪ್ ತಂಡ

Photo Credit : al-monitor
ಇಸ್ತಾಂಬುಲ್, ಜೂ. 3: ಇರಾನ್ ಫುಟ್ಬಾಲ್ ವಿಶ್ವಕಪ್ ತಂಡವು ರವಿವಾರ ಮೆಕ್ಸಿಕೊವನ್ನು ತಲುಪಲಿದ್ದು, ಅಲ್ಲಿ ಜಾಗತಿಕ ಫುಟ್ಬಾಲ್ ಪಂದ್ಯಾವಳಿಗಾಗಿ ತರಬೇತಿ ನಡೆಸಲಿದೆ.
‘ಇರಾನ್ ರಾಷ್ಟ್ರೀಯ ಫುಟ್ಬಾಲ್ ತಂಡವು ಜೂ. 6ರಂದು ಅಂಟಾಲ್ಯದಿಂದ ನಿರ್ಗಮಿಸಿ, ಜೂ. 7ರಂದು ಮೆಕ್ಸಿಕೊ ತಲುಪಲಿದೆ’ ಎಂದು ತಂಡವು ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಇರಾನ್ ಆಟಗಾರರು ಮೇ 18ರಿಂದ ಅಂಟಾಲ್ಯದಲ್ಲಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದು, ಅಮೆರಿಕದ ವೀಸಾಕ್ಕಾಗಿ ಕಾಯುತ್ತಿದ್ದಾರೆ.
2026ರ ವಿಶ್ವಕಪ್ ಟೂರ್ನಿಯು ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾದ ಜಂಟಿ ಆತಿಥ್ಯದಲ್ಲಿ ಜೂ. 11ರಿಂದ ಜುಲೈ 19ರವರೆಗೆ ನಡೆಯಲಿದೆ.
‘ಜಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಇರಾನ್ ತಂಡವು ಜೂ. 15 ಹಾಗೂ 21ರಂದು ನ್ಯೂಜಿಲೆಂಡ್ ಮತ್ತು ಬೆಲ್ಜಿಯಂ ವಿರುದ್ಧ ಆಡಲಿದ್ದು, ಜೂ. 26ರಂದು ಈಜಿಪ್ಟ್ ತಂಡವನ್ನು ಎದುರಿಸಲಿದೆ.
Next Story




