ಪಾಕಿಸ್ತಾನ ವಿರುದ್ಧ ಮೂರನೇ ವೇಗದ ಅರ್ಧಶತಕ| ಯುವರಾಜ್ ಸಿಂಗ್ ದಾಖಲೆ ಮುರಿದ ಇಶಾನ್ ಕಿಶನ್

Photo Credit : x/BCCI
ಕೊಲಂಬೊ, ಫೆ.15: ಭಾರತ ಕ್ರಿಕೆಟ್ ತಂಡವು ಅರಂಭಿಕ ಆಟಗಾರ ಅಭಿಷೇಕ್ ಶರ್ಮಾರನ್ನು ಶೂನ್ಯಕ್ಕೆ ಕಳೆದುಕೊಂಡಾಗ ತಂಡವನ್ನು ಆಧರಿಸಿದ ಇನ್ನೋರ್ವ ಆರಂಭಿಕ ಆಟಗಾರ ಇಶಾನ್ ಕಿಶನ್ ಪಾಕಿಸ್ತಾನದ ವಿರುದ್ಧ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೂರನೇ ವೇಗದ ಅರ್ಧಶತಕ ಗಳಿಸಿ ಗಮನ ಸೆಳೆದರು.
ಅಬ್ರಾರ್ ಅಹ್ಮದ್ ಎಸೆದ ಏಳನೇ ಓವರ್ನ ಎರಡನೇ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಕಿಶನ್ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಭಾರತ ತಂಡವು ಪವರ್ಪ್ಲೇ ಅಂತ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತು.
ಕಿಶನ್ ಮೊದಲ ಓವರ್ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದಾಗ ತಂಡವನ್ನು ಆಧರಿಸಿದ ಕಿಶನ್ 40 ಎಸೆತಗಳಲ್ಲಿ 77 ರನ್ ಗಳಿಸಿದರು.
Next Story




