ಐಎಸ್ಎಸ್ಎಫ್ ವಿಶ್ವಕಪ್: 35 ಸದಸ್ಯರ ತಂಡ ಪ್ರಕಟಿಸಿದ ಭಾರತ; ಮನು ಭಾಕರ್ ಸಾರಥ್ಯ

ಮನು ಭಾಕರ್ | PC : PTI
ಹೊಸದಿಲ್ಲಿ: ಪ್ರಮುಖ ಪಿಸ್ತೂಲ್ ಶೂಟರ್ ಹಾಗೂ ಖೇಲ್ ರತ್ನ ಪ್ರಶಸ್ತಿ ವಿಜೇತೆ ಮನು ಭಾಕರ್ ಅವರು ದಕ್ಷಿಣ ಅಮೆರಿಕದಲ್ಲಿ ನಡೆಯಲಿರುವ ಮುಂಬರುವ ಐಎಸ್ಎಸ್ಎಫ್ ವಿಶ್ವಕಪ್ ಟೂರ್ನಿಯಲ್ಲಿ 35 ಸದಸ್ಯರನ್ನು ಒಳಗೊಂಡ ಭಾರತದ ಬಲಿಷ್ಠ ತಂಡದ ಸಾರಥ್ಯ ವಹಿಸಲಿದ್ದಾರೆ.
ಪ್ಯಾರಿಸ್ ಗೇಮ್ಸ್ನ ಹಲವು ಒಲಿಂಪಿಯನ್ ಗಳು ತಂಡದಲ್ಲಿದ್ದಾರೆ.
ಈ ಋತುವಿನ ಮೊದಲ ಹಂತದ ವಿಶ್ವಕಪ್ ಟೂರ್ನಿಯು ಅರ್ಜೆಂಟೀನದ ಬ್ಯುನಸ್ ಐರಿಸ್ ನಲ್ಲಿ ಎ.1ರಿಂದ 11ರ ತನಕ ನಡೆಯಲಿದೆ. ಆ ನಂತರ ಎರಡನೇ ಹಂತದ ವಿಶ್ವಕಪ್ ಎ.13ರಿಂದ 22ರ ತನಕ ಪೆರುವಿನ ಲಿಮಾದಲ್ಲಿ ನಡೆಯಲಿದೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ವೈಯಕ್ತಿಕ ಹಾಗೂ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಎರಡು ಕಂಚಿನ ಪದಕ ಜಯಿಸಿದ್ದ ಭಾಕರ್ ಮಹಿಳೆಯರ ಏರ್ ಪಿಸ್ತೂಲ್ ಹಾಗೂ 25 ಮೀ. ಪಿಸ್ತೂಲ್ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.
ದಕ್ಷಿಣ ಅಮೆರಿಕದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ತಯಾರಿಗಾಗಿ ಭಾರತದ ನ್ಯಾಶನಲ್ ರೈಫಲ್ ಅಸೋಸಿಯೇಶನ್ ಮಾ.14ರಿಂದ ಹೊಸದಿಲ್ಲಿಯ ಕರ್ಣಿ ಸಿಂಗ್ ರೇಂಜ್ನಲ್ಲಿ ತರಬೇತಿ ಶಿಬಿರ ಆಯೋಜಿಸಿದೆ.
►ತಂಡ(ವೈಯಕ್ತಿಕ ಸ್ಪರ್ಧೆಗಳು)
ಏರ್ ರೈಫಲ್:
ಪುರುಷರ ವಿಭಾಗ: ರುದ್ರಾಂಕ್ಷ್ ಪಾಟೀಲ್, ಅರ್ಜುನ್ ಬಬುಟಾ, ಹೃದಾಯ್ ಹಝಾರಿಕಾ.
ಮಹಿಳೆಯರ ವಿಭಾಗ: ಆರ್ಯ ರಾಜೇಶ್ ಬೋರ್ಸೆ, ನರ್ಮದಾ ನಿತಿನ್, ಸೋನಂ ಉತ್ತಮ್ ಮಾಸ್ಕರ್.
50 ಮೀ.ರೈಫಲ್-3 ಪೊಸಿಶನ್ಸ್:
ಪುರುಷರ ವಿಭಾಗ: ಐಶ್ವರ್ಯಾ ಪ್ರತಾಪ್ ಸಿಂಗ್, ಚೈನ್ ಸಿಂಗ್, ನೀರಜ್ ಕುಮಾರ್.
ಮಹಿಳೆಯರ ವಿಭಾಗ: ಆಶಿ ಚೌಕ್ಸೆ, ಶ್ರೀಯಾಂಕಾ ಸದಂಗಿ, ಸಿಫ್ಟ್ ಕೌರ್ ಸಮ್ರಾ.
ಏರ್ ಪಿಸ್ತೂಲ್:
ಪುರುಷರ ವಿಭಾಗ: ಸೌರಭ್ ಚೌಧರಿ, ರವೀಂದ್ರ ಸಿಂಗ್, ವರುಣ್ ಥೋಮರ್.
ಮಹಿಳೆಯರ ವಿಭಾಗ: ಸುರುಚಿ, ಮನು ಭಾಕರ್, ಸೈನ್ಯಮ್
25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್:
ಪುರುಷರ ವಿಭಾಗ: ಅನಿಶ್ ಭನ್ವಾಲಾ, ವಿಜಯವೀರ್ ಸಿಧು, ಗುರುಪ್ರೀತ್ ಸಿಂಗ್.
25 ಮೀ. ಸ್ಪೋರ್ಟ್ಸ್ ಪಿಸ್ತೂಲ್:
ಮಹಿಳೆಯರ ವಿಭಾಗ: ಮನು ಭಾಕರ್, ಸಿಮ್ರಾನ್ಪ್ರೀತ್ ಕೌರ್, ಇಶಾ ಸಿಂಗ್.
ಟ್ರ್ಯಾಪ್:
ಪುರುಷರ ವಿಭಾಗ: ಲಕ್ಷ್ಯ, ಪೃಥ್ವಿರಾಜ್ ಟೊಂಡೈಮನ್, ರೊರಾವರ್ ಸಿಂಗ್ ಸಂಧು.
ಮಹಿಳೆಯರ ವಿಭಾಗ: ನೀರೂ, ಪ್ರಗತಿ ದುಬೆ, ಭವ್ಯಾ ತ್ರಿಪಾಠಿ.
ಸ್ಕೀಟ್:
ಪುರುಷರ ವಿಭಾಗ: ಭವ್ತೇಘ್ ಸಿಂಗ್ ಗಿಲ್, ಅನಂತಜೀತ್ ನರುಕಾ, ಗುರ್ಜೋತ್ ಸಿಂಗ್.
ಮಹಿಳೆಯರ ವಿಭಾಗ: ರೈಝಾ ದಿಲ್ಲೋನ್, ಗನೆಮತ್ ಸೆಖೋನ್, ದರ್ಶನ್ ರಾಥೋಡ್.
ಮಿಕ್ಸೆಡ್ ಟೀಮ್ ಸ್ಪರ್ಧೆಗಳು:
ಏರ್ ರೈಫಲ್ ಮಿಕ್ಸೆಡ್ ಟೀಮ್: ರುದ್ರಾಂಕ್ಷ್ ಪಾಟೀಲ್, ಆರ್ಯ ರಾಜೇಶ್ ಬೋರ್ಸೆ, ಅರ್ಜುನ್ ಬಬುಟಾ, ನರ್ಮದಾ ನಿತಿನ್.
ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್: ಸೌರಭ್ ಚೌಧರಿ, ಸುರುಚಿ, ರವಿಂದರ್ ಸಿಂಗ್, ಮನು ಭಾಕರ್.
ಟ್ರ್ಯಾಪ್ ಮಿಕ್ಸೆಡ್ ಟೀಮ್: ಲಕ್ಷ್ಯ, ನೀರೂ; ಪೃಥ್ವಿರಾಜ್, ಪ್ರಗತಿ ದುಬೆ.







