ಐಎಸ್ಎಸ್ಎಫ್ ವಿಶ್ವಕಪ್ ಫೈನಲ್ ; 25 ಮೀ ರ್ಯಾಪಿಡ್ ಫಯರ್ನಲ್ಲಿ ಪಿಸ್ತೂಲ್ ಶೂಟರ್ ಅನೀಶ್ ಭನ್ವಾಲಗೆ ಕಂಚು

Photo: X/SportsArena1234
ದೋಹಾ (ಖತರ್): ಖತರ್ ರಾಜಧಾನಿ ದೋಹಾದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ ಫೈನಲ್ ನಲ್ಲಿ ಭಾರತದ ಯುವ ಪಿಸ್ತೂಲ್ ಶೂಟರ್ ಅನೀಶ್ ಭನ್ವಾಲ ಶುಕ್ರವಾರ 25 ಮೀಟರ್ ರ್ಯಾಪಿಡ್ ಫಯರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದು 25 ಮೀಟರ್ ರ್ಯಾಪಿಡ್ ಫಯರ್ ಪಿಸ್ತೂಲ್ ಸ್ಪರ್ಧೆಯೊಂದರಲ್ಲಿ ಭಾರತ ಗೆದ್ದಿರುವ ಮೊತ್ತ ಮೊದಲ ಪದಕವಾಗಿದೆ.
21 ವರ್ಷದ ಅನೀಶ್ ಫೈನಲ್ ನಲ್ಲಿ 27 ಶಾಟ್ ಗಳನ್ನು ಹೊಡೆದರು. ವಿಶ್ವ ಚಾಂಪಿಯನ್ ಶಿಪ್ ಕಂಚಿನ ಪದಕ ವಿಜೇತ ಜರ್ಮನಿಯ ಪೀಟರ್ ಫ್ಲೋರಿಯನ್ 35 ಶಾಟ್ ಗಳೊಂದಿಗೆ ಚಿನ್ನದ ಪದಕ ಗೆದ್ದರು. ಹಾಲಿ ವಿಶ್ವ ಚಾಂಪಿಯನ್ ಹಾಗೂ ಎರಡು ಒಲಿಂಪಿಕ್ ಪದಕಗಳ ಒಡೆಯ ಚೀನಾದ ಲಿ ಯೂಹಾಂಗ್ 33 ಶಾಟ್ಗಳೊಂದಿಗೆ 33 ಶಾಟ್ಗಳೊಂದಿಗೆ ಬೆಳ್ಳಿ ಪದಕ ಗೆದ್ದರು.
ಅನೀಶ್ ಆರು ಸ್ಪರ್ಧಿಗಳ ಫೈನಲ್ ಗೆ ಆರನೆಯವರಾಗಿ ಪ್ರವೇಶ ಪಡೆದರು. 581 ಅಂಕಗಳನ್ನು ಪಡೆದ ಅವರು ಆರನೇ ಸ್ಥಾನ ಪಡೆದರು ಹಾಗೂ ಜರ್ಮನಿಯ ಕ್ರಿಶ್ಚಿಯನ್ ರೀಟ್ಝ್ ರನ್ನು ಏಳನೇ ಸ್ಥಾನಕ್ಕೆ ತಳ್ಳಿದರು.
Next Story





