ವೋಕ್ಸ್ ಎಸೆತಕ್ಕೆ ತುಂಡಾದ ಯಶಸ್ವಿ ಜೈಸ್ವಾಲ್ ಬ್ಯಾಟ್!

ಜೈಸ್ವಾಲ್ | PC : PTI
ಮ್ಯಾಂಚೆಸ್ಟರ್, ಜು. 23: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ನ ಮೊದಲ ದಿನವಾದ ಬುಧವಾರ, ಭಾರತೀಯ ಆರಂಭಿಕ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಮಾಡುತ್ತಿದ್ದಾಗ ಅವರ ಬ್ಯಾಟ್ ಮುರಿದಿದೆ.
ದಿನದ ಮೊದಲ ಅವಧಿಯಲ್ಲಿ, ಬೌಲರ್ ಕ್ರಿಸ್ ವೋಕ್ಸ್ ರ ಎಸೆತವನ್ನು ರಕ್ಷಣಾತ್ಮಕವಾಗಿ ಆಡುತ್ತಿದ್ದಾಗ ಅವರ ಬ್ಯಾಟ್ ಮುರಿಯಿತು. ಇದು ಡ್ಯೂಕ್ಸ್ ಚೆಂಡಿನ ತಯಾರಿ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಿದೆ.
ಜೈಸ್ವಾಲ್ ಭಾರತೀಯ ಇನಿಂಗ್ಸ್ನ 9ನೇ ಓವರ್ ನಲ್ಲಿ ವೋಕ್ಸ್ರ ಶಾರ್ಟ್-ಆಫ್-ಲೆಂತ್ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ಮುಂದಾದರು. ಚೆಂಡಿನ ರಭಸಕ್ಕೆ ಬ್ಯಾಟ್ ನ ಹಿಡಿಕೆಯ ಭಾಗವು ಮುರಿಯಿತು. ದಂಗಾದ ಜೈಸ್ವಾಲ್ ಇನ್ನೊಂದು ಬ್ಯಾಟ್ ತರಲು ಹೋದರು.
ಕುತೂಹಲಕರ ಸಂಗತಿಯೆಂದರೆ, ಚೆಂಡಿನ ವೇಗ ಕೇವಲ ಗಂಟೆಗೆ 126 ಕಿ.ಮೀ. ಆಗಿತ್ತು. ಇದು, ಡ್ಯೂಕ್ ಚೆಂಡು ಒಮ್ಮೆಲೆ ನಿರೀಕ್ಷೆಗಿಂತಲೂ ಗಟ್ಟಿಯಾಗಿದೆಯೇ ಎಂಬ ಸಂದೇಹಕ್ಕೆ ಎಡೆಮಾಡಿದೆ.
Next Story





